ತಂದೆ-ತಾಯಿ, ಅಜ್ಜಿಯನ್ನು ಹತ್ಯೆ ಮಾಡಿ ಸ್ಯಾನಿಟೈಸರ್ ಬಳಸಿ ಸುಟ್ಟು ಹಾಕಿದ ಮಗ

Murder Crime
Published on

ಮಹಾಸಮುಂದ್​​: ಹಣವನ್ನು ಕೊಡಲಿಲ್ಲ ಎಂಬ ಕಾರಣಕ್ಕೆ 24 ವರ್ಷದ ಯುವಕನೊಬ್ಬ ತನ್ನ ತಂದೆ-ತಾಯಿ ಮತ್ತು ಅಜ್ಜಿಯನ್ನು ಕೊಂದು, ಅವರ ದೇಹವನ್ನು ಸುಟ್ಟು ಹಾಕಿದ ದುರ್ಘಟನೆ ಛತ್ತಿಸಗಡ್​ದ ಮಹಾಸಮುಂದ್​​ ಜಿಲ್ಲೆಯ ಪುಟ್ಕಾ ಗ್ರಾಮದಲ್ಲಿ ನಡೆದಿದೆ.

ಮೇ 12ರಂದು ಉದಿತ್ ಎಂಬಾತ, ತಮ್ಮ ತಂದೆ ಪ್ರಭಾತ್ ಭೋಯ್(53), ತಾಯಿ ಜರ್ನಾ(47) ಮತ್ತು ಅಜ್ಜಿ ಸುಲೋಚನಾ (75) ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದ. ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ದೂರುದಾರ ಉದಿತ್​ನೇ​ ತನ್ನ ಹೆತ್ತವರನ್ನು ಕೊಲೆ ಮಾಡಿ, ನಾಪತ್ತೆಯಾಗಿದ್ದಾರೆ ಎಂದು ನಾಟಕವಾಡುತ್ತಿದ್ದ ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ, ಬಂಧನಕ್ಕೊಳಗಾಗಿರುವ ಆರೋಪಿ ಉದಿತ್ ಭೋಯ್ ಮಾದಕ ವ್ಯಸನಿಯಾಗಿದ್ದು, ಆತ ಹಣಕ್ಕಾಗಿ ಹೆತ್ತವರೊಡನೆ ಜಗಳವಾಡುತ್ತಿದ್ದ. ಮೇ 8ರ ಮುಂಜಾನೆ, ಉದಿತ್ ತನ್ನ ಪೋಷಕರು ಮತ್ತು ಅಜ್ಜಿಯನ್ನು ಹಾಕಿ ಸ್ಟಿಕ್‌ನಿಂದ ಹೊಡೆದು ಕೊಂದು, ಮರದ ದಿಮ್ಮಿಗಳು ಮತ್ತು ಸ್ಯಾನಿಟೈಸರ್ ಬಳಸಿ ದೇಹಗಳನ್ನು ಸುಟ್ಟುಹಾಕಿದ್ದ.

ಆದರೆ, ಆತನ ಸಹೋದರ ಅಮಿತ್​ ತನ್ನ ತಂದೆ ತಾಯಿ ನಾಪತ್ತೆಯಾಗಿರುವ ವಿಷಯ ತಿಳಿದು ಗ್ರಾಮಕ್ಕೆ ಬಂದಿದ್ದ. ಹೀಗೆ ಬಂದ ವೇಳೆ ಆತ ಮನೆಯ ಹಿತ್ತಲಿನಲ್ಲಿದ್ದ ತರಕಾರಿ ತೋಟಕ್ಕೆ ತೆರಳಿದ್ದಾಗ, ಅಲ್ಲಿ ಚಿತಾಭಸ್ಮ ಮತ್ತು ಮೂಳೆ ತುಣುಕುಗಳು ಹಾಗೂ ಗೋಡೆಗಳ ಮೇಲೆ ರಕ್ತದ ಕಲೆ ನೋಡಿ ಅನುಮಾನಗೊಂಡು ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದ. ಅನುಮಾನಗೊಂಡ ಪೊಲೀಸರು ಉದಿತ್​ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಕೃತ್ಯವು ಬಯಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net