More

    ಶಾಮೀದಲಿ ದರ್ಗಾದ ಕಲ್ಯಾಣಿ ಸ್ವಚ್ಛತೆ ಕಡೆಗಣನೆ: ಭಕ್ತರು ಹರಕೆ ಬಟ್ಟೆ ಎಸೆತವೇ ಕಲುಷಿತಕ್ಕೆ ಕಾರಣ

    ತಾವರಗೇರಾ: ಪಟ್ಟಣದ ಶಾಮೀದಲಿ ದರ್ಗಾದ ಕಲ್ಯಾಣಿ (ಹೊಕ್ರಾಣಿ) ಯಲ್ಲಿ ನೀರು ಕಲುಷಿತಗೊಂಡಿವೆ. ಭಕ್ತರು ಹರಕೆ ತೀರಿಸಿದ ಬಟ್ಟೆಗಳನ್ನು ಕಲ್ಯಾಣಿಗೆ ಎಸೆದು ಮತ್ತಷ್ಟು ಕಲುಷಿತಗೊಳಿಸುತ್ತಿದ್ದಾರೆ.

    ಅಂಕುಷ ಮಹಾರಾಜನೆಂಬ ಸಾಮಂತ ಅರಸ ಆಳ್ವಿಕೆ ಇತಿಹಾಸ

    ಹೊಕ್ರಾಣಿ ನೂರಾರು ವರ್ಷಗಳ ಇತಿಹಾಸ ಹೊಂದಿದ್ದು, ಇಲ್ಲಿ ಹಿಂದೆ ಅಂಕುಷ ಮಹಾರಾಜನೆಂಬ ಸಾಮಂತ ಅರಸ ಆಳ್ವಿಕೆ ಮಾಡಿದ ಬಗ್ಗೆ ಹಳೆಯ ದಾಖಲೆಗಳಿಂದ ತಿಳಿಯುತ್ತದೆ. ಅರಸನೆ ಹೊಕ್ರಾಣಿ, ವೈಜನಾಥ ಬಾವಿ, ಊರ ಮುಂದಿನ ರಾಯನಕೆರೆ ನಿರ್ಮಾಣ ಮಾಡಿದ್ದನಂತೆ. ಶಾಮೀದಲಿ ದರ್ಗಾದ ದರ್ಶನಕ್ಕೆ ಬರುವ ಭಕ್ತರು ಹೊಕ್ರಾಣಿಯಲ್ಲಿನ ನೀರನ್ನು ತೀರ್ಥ ಎಂಬ ಭಾವನೆಯಿಂದ ಕುಡಿಯುತ್ತಾರೆ. ಕೆಲ ಭಕ್ತರು ಹರಕೆಯ ಬಟ್ಟೆಗಳನ್ನು ಹೊಕ್ರಾಣಿಯಲ್ಲಿ ಬಿಸಾಡುತ್ತಿದ್ದು, ಇದರಿಂದ ಘನ ತ್ಯಾಜ್ಯ ಸಂಗ್ರಹವಾಗಿದೆ.

    ಇದನ್ನೂ ಓದಿ: ಕಸದ ಗುಂಡಿಗಳಿಂದ ರೋಗ ಭೀತಿ, ಗ್ರಾಪಂ ನಿರ್ಲಕ್ಷ್ಯ ಧೋರಣೆ, ಮೂಲಸೌಕರ್ಯಕ್ಕೆ ಜನರ ಪರದಾಟ

    ಈಗ ಯಾರೂ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿಲ್ಲ

    3-4 ವರ್ಷಗಳ ಹಿಂದೆ ಪಪಂ ಹಾಗೂ ಸಾರ್ವಜನಿಕರು ಸೇರಿ ಹೊಕ್ರಾಣಿಯನ್ನು ಸ್ವಚ್ಛ ಮಾಡಿದ್ದರು. ಎರಡು ತಿಂಗಳ ಹಿಂದೆಯೂ ಪಪಂನವರೇ ಸ್ವಚ್ಛಗೊಳಿಸಿದ್ದರು. ನಂತರ ಯಾರೂ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿಲ್ಲ. ಎರಡು ದಶಕಗಳ ಹಿಂದೆ ಇದೇ ಹೊಕ್ರಾಣಿಯಲ್ಲಿ ಸಾವಿರಾರು ಚಿಕ್ಕ ಮಕ್ಕಳು ಈಜು ಕಲಿತಿದ್ದಾರೆ. ಈಗ ಈಜು ಕಲಿಯಲು ಹೊಕ್ರಾಣಿ ಉತ್ತಮವಾಗಿಲ್ಲ.
    ಭಕ್ತರು ಸಹ ಘನ ತ್ಯಾಜ್ಯ ಇದರಲ್ಲಿ ಹಾಕದೇ ಹೊರಗಡೆ ಬಿಸಾಡಬೇಕು. ಪಪಂ ಈ ಕಲ್ಯಾಣಿಯನ್ನು ಸ್ವಚ್ಛತೆಗೊಳಿಸಬೇಕೆಂದು ರಾಣಾ ಪ್ರತಾಪ್ ಸಿಂಗ್ ಯುವ ಮಂಡಳ ಸದಸ್ಯರಾದ ರಾಘವೇಂದ್ರ ಸಿಂಗ್, ರಾಮಣ್ಣ , ಹನಮಾನ ಸಿಂಗ್ ಒತ್ತಾಯಿಸಿದರು.

    ಹೊಕ್ರಾಣಿಯಲ್ಲಿರುವ ತ್ಯಾಜ್ಯ ತೆಗೆಯುವಂತೆ ಪಪಂಗೆ ಕಳೆದ 3-4 ತಿಂಗಳಿನಿಂದ ತಿಳಿಸಿದರೂ ಯಾವುದೇ ಕ್ರಮ ತೆಗೆದು ಕೊಂಡಿಲ್ಲ. ನೂತನ ಶಾಸಕರ ಗಮನಕ್ಕೆ ತಂದಿದ್ದು ಹೊಕ್ರಾಣಿಯನ್ನು ಉರುಸಿನ ಒಳಗಾಗಿ ಸ್ವಚ್ಛ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ.
    ನಾರಾಯಣ ಸಿಂಗ್ ಬಳ್ಳಾರಿ, ಅಧ್ಯಕ್ಷರು ರಾಣಾ ಪ್ರತಾಪಸಿಂಗ್ ಯುವಕ ಮಂಡಳ, ತಾವರಗೇರಾ

    ಮುಂದಿನ ತಿಂಗಳು ಉರುಸು ಇದ್ದು, ದರ್ಗಾದ ಹೊಕ್ರಾಣಿಯ ತ್ಯಾಜ್ಯ ಹಾಗೂ ಹೂಳನ್ನು ಇದೇ ವಾರದಲ್ಲಿ ತೆಗೆಸಿ ನೀರನ್ನು ಕಲುಷಿತವಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು.
    ನಬಿಸಾಬ್ ಖುದನವರಮುಖ್ಯಾಧಿಕಾರಿ, ಪಪಂ. ತಾವರಗೇರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts