ಮೀನಿನ ಮೂತಿ ಚುಚ್ಚಿ ಯುವಕ ಸಾವು | Fish

Bbau (24)
Published on

ಕಾರವಾರ: ಮೀನಿನ(Fish) ಮೂತಿ ಚುಚ್ಚಿ ಗಾಯಗೊಂಡಿದ್ದ ತಾಲೂಕಿನ ಮಾಜಾಳಿಯ ದಾಂಡೇಬಾಗದ ಮೀನುಗಾರ, ಕ್ರಿಕೆಟ್ ಪಟು ಅಕ್ಷಯ ಅನಿಲ ಮಾಜಾಳಿಕರ್(24) ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದಾನೆ.

ಎರಡು ದಿನಗಳ ಹಿಂದೆ ಅಕ್ಷಯ್ ಮೀನುಗಾರಿಕೆಗೆ ತೆರಳಿದಾಗ ಸ್ಥಳೀಯವಾಗಿ 'ತೋಳೆ ಕಾಂಡೆ ಮೀನು' ಎಂದು ಕರೆಯಲಾಗುವ ಅಟ್ಲಾಂಟಿಕ್ ನೀಡಲ್ ಫಿಶ್ ಆತನ ಹೊಟ್ಟೆಗೆ ಚುಚ್ಚಿತ್ತು. ಗಾಯಗೊಂಡಿದ್ದ ಆತನನ್ನು ಕಾರವಾರ ಕ್ರಿಮ್ಸ್ ಬೋಧಕ ಆಸ್ಪತ್ರೆಗೆ ಸೇರಿಸಲಾಗಿತ್ತು. ವೈದ್ಯರು ಗಾಯಕ್ಕೆ ಹೊಲಿಗೆ ಹಾಕಿ ಚಿಕಿತ್ಸೆ ನೀಡಿದ್ದರು. ಆದರೆ, ಆತ ಗುಣಮುಖವಾಗದ ಕಾರಣ ಮತ್ತೆ ಆಸ್ಪತ್ರೆಗೆ ಸೇರಿಸಲಾಗಿತ್ತು.

ಬುಧವಾರ ರಾತ್ರಿ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ವೈದ್ಯರ ನಿರ್ಲಕ್ಷ್ಯದಿಂದ ಸಾವಾಗಿದೆ ಎಂದು ಆರೊಪಿಸಿ, ಮಾಜಾಳಿ ಭಾಗದ ನಾಗರಿಕರು, ಕ್ರಿಕೆಟ್ ಆಟಗಾರರು ನೂರಾರು ಸಂಖ್ಯೆಯಲ್ಲಿ ಕ್ರಿಮ್ಸ್ ಎದುರು ಜಮಾಯಿಸಿ ಗುರುವಾರ ಪ್ರತಿಭಟನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net