ಶೀಘ್ರದಲ್ಲೇ ಪುಟಿನ್ ಭೇಟಿ; 8 ಯುದ್ಧ ನಿಲ್ಲಿಸಿದ್ದೇನೆ, ರಷ್ಯಾ-ಯೂಕ್ರೇನ್​ ವಾರ್​ ಕೂಡ ಸ್ಟಾಪ್​ ಮಾಡುವೆ: Donald Trump

Bbau (23)
Published on

ನ್ಯೂಯಾರ್ಕ್​: ರಷ್ಯಾ ಮತ್ತು ಯೂಕ್ರೇನ್ ನಡುವಿನ ಎರಡೂವರೆ ವರ್ಷಗಳ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಒಂದೆರಡು ವಾರಗಳಲ್ಲಿ ಭೇಟಿಯಾಗುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಶುಕ್ರವಾರ ಹೇಳಿದ್ದಾರೆ.

ಯೂಕ್ರೇನ್​ ಯುದ್ಧವನ್ನು ಕೊನೆಗೊಳಿಸಲು ಸಾಧ್ಯವಾದರೆ ಇದು ಒಂಬತ್ತನೇ ಜಾಗತಿಕ ಸಂಘರ್ಷ ಇದಾಗುತ್ತದೆ ಎಂದು ಟ್ರಂಪ್ ವಾಷಿಂಗ್ಟನ್‌ನ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ತಿಳಿಸಿದರು. ಈ ಹಿನ್ನೆಲೆ ಯೂಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಶುಕ್ರವಾರ ಭೇಟಿಯಾಗುವುದಾಗಿ ಟ್ರಂಪ್ ಹೇಳಿದರು.

"ನಮ್ಮ ಮಾರ್ಕೊ ರೂಬಿಯೊ ಅವರು ರಷ್ಯಾದ ಸೆರ್ಗೆಯ್ ಲಾವ್ರೊವ್ ಅವರನ್ನು ಭೇಟಿಯಾಗಲಿದ್ದಾರೆ. ಅದು (ರಷ್ಯಾದ ಅಧ್ಯಕ್ಷ ಪುಟಿನ್ ಅವರೊಂದಿಗೆ) ಬಹಳ ಫಲಪ್ರದವಾದ ಫೋನ್ ಕರೆಯಾಗಿತ್ತು. ನಾನು ಅವರನ್ನು ಭೇಟಿಯಾಗುತ್ತೇನೆ. ಅದಷ್ಟು ಬೇಗ ಯುದ್ಧ ನಿಲ್ಲಿಸುವ ಬಗ್ಗೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ" ಎಂದು ಟ್ರಂಪ್ ಹೇಳಿದರು.

ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಭೇಟಿ ಮಾಡಿ ಕರೆಯ ಬಗ್ಗೆ ಹೇಳುತ್ತೇನೆ. ನಾವು ಈಗ 8 ಯುದ್ಧಗಳನ್ನು (ಪರಿಹರಿಸಿದ್ದೇವೆ) ಮತ್ತು ನಾವು ಈ ಸಂಖ್ಯೆಯನ್ನು 9 ಮಾಡುತ್ತೇವೆ ಎಂದು ಹೇಳಿದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net