ಮದ್ವೆಯಾಗಿ 3 ತಿಂಗಳಾದ್ರೂ ಲೈಂಗಿಕ ಸಂಪರ್ಕಕ್ಕಿಲ್ಲ ಅವಕಾಶ: ಕಿಲಾಡಿ ಲೇಡಿಯ ಕರಾಳ ಮುಖ ಬಯಲು

Khiladi Lady
Published on

ಬೆಂಗಳೂರು: ಖತರ್ನಾಕ್​ ಲೇಡಿಯೊಬ್ಬಳು ಫೇಸ್​ಬುಕ್​ ಮೂಲಕ ವ್ಯಕ್ತಿಯೊಬ್ಬನನ್ನು ಪರಿಚಯ ಮಾಡಿಕೊಂಡು, ಪ್ರೇಮದ ಬಲೆಗೆ ಬೀಳಿಸಿ, ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿರುವ ಪ್ರಕರಣ ರಾಜ್ಯ ರಾಜಧಾನಿಯ ಚಂದ್ರಲೇಔಟ್​ನಲ್ಲಿ ಬೆಳಕಿಗೆ ಬಂದಿದೆ.

ಸಂತೋಷ್​​ ಎಂಬಾತನಿಗೆ ಫೇಸ್​ಬುಕ್​ನಲ್ಲಿ ಯುವತಿಯೊಬ್ಬಳ ಪರಿಚಯವಾಗಿತ್ತು. ಬಳಿಕ 2018ರಲ್ಲಿ ತಾನು ಕೆಲಸ ಮಾಡುವ ಕಂಪನಿಯಲ್ಲಿ ಕೆಲಸ ಕೊಡಿಸಿದ್ದ. ಇದೇ ಪರಿಚಯದ ಮೇಲೆ ಸಂತೋಷ್ ಮತ್ತು ಯುವತಿ ನಡುವೆ ಪ್ರೇಮಾಂಕುರವಾಗಿತ್ತು. ಬಳಿಕ ಮದುವೆಯಾಗಲು ಸಹ ನಿರ್ಧರಿಸಿದರು.

ಆದ್ರೆ ಯುವತಿಗೆ ಈ ಮೊದಲೇ ಮದುವೆಯಾಗಿದ್ದು, ಅದನ್ನು ಮುಚ್ಚಿಟ್ಟು ಸಂತೋಷ್ ಜೊತೆ ಮದುವೆಯಾದಳು. ಯುವತಿಯ ಅಕ್ಕ ಮತ್ತು ಬಾವ ಅರುಣ್​ ಸೇರಿ ಇಬ್ಬರಿಗೂ ಮದುವೆ ಮಾಡಿಸಿದ್ದರು. ನಾದಿನಿ ಜೊತೆ ಮದುವೆ ಮಾಡಿಸಲು ಯುವತಿಯ ಬಾವ ಅರುಣ್​, ಸಂತೋಷ್​ ಬಳಿ ಐದು ಲಕ್ಷ ರೂಪಾಯಿ ಹಣ ಪೀಕಿದ್ದ. ಇದಾದ ಬಳಿಕ ಯುವತಿಯ ಅಕ್ಕನ ಸರದಿ. 15 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿಗೆ ಸ್ಕೇಚ್ ಹಾಕಿದ್ದಳು.

ಮದುವೆ ಮಾಡಿಸಲು ಚಿನ್ನದ ಆಭರಣ ಮಾಡಿಸುವಂತೆ ಯುವತಿಯ ಅಕ್ಕ, ಸಂತೋಷ್​ಗೆ ಹೇಳಿದ್ದಳು. ಬಾವ ಮತ್ತು ಅಕ್ಕನ ಸರದಿಯಾಗ್ತಿದ್ದಂತೆ ಯುವತಿಯ ಬೇಡಿಕೆ ಎದುರಾಯ್ತು. ಮದುವೆಗೂ ಮುಂಚೆ ಐಫೋನ್​ಗೆ ಬೇಡಿಕೆ ಇಟ್ಟಳು. ಮನ ಮೆಚ್ಚಿದ ಹುಡುಗಿ ಕೇಳಿದಳು ಎಂದು 2.60 ಲಕ್ಷ ರೂ. ಮೌಲ್ಯದ ಐಫೋನ್‌ ಅನ್ನು ಸಂತೋಷ್​ ಕೊಡಿಸಿದ್ದ.

ಹಣ, ಆಭರಣ ಹಾಗೂ ಮೊಬೈಲ್ ಫೋನ್ ಬಳಿಕ ಮದುವೆ ತಯಾರಿ ಶುರುವಾಯ್ತು. 2022 ರಂದು ನವೆಂಬರ್​ನಲ್ಲಿ ಮದ್ದೂರಮ್ಮ ದೇವಾಲಯದಲ್ಲಿ ಇಬ್ಬರಿಗೂ ಮದುವೆ ಮಾಡಲಾಯಿತು. ಆದರೆ, ಮದುವೆಯಾಗಿ ಸಂಸಾರ ನಡೆದಿದ್ದು ಕೇವಲ ಮೂರು ತಿಂಗಳು ಮಾತ್ರ. ಶಾಸ್ತ್ರೋಕ್ತವಾಗಿ ಮದುವೆಯಾದರೂ ದೈಹಿಕ ಸಂಪರ್ಕಕಕ್ಕೆ ಅವಕಾಶ ನೀಡಿಲ್ಲ ಮತ್ತು ಮೋಸ ಮಾಡುವ ಉದ್ದೇಶದಿಂದಲೇ ಮದುವೆಯಾಗಿದ್ದಾರೆ ಎಂದು ದೂರು ನೀಡಿದ.

ಮದುವೆಯಾದ ಬಳಿಕ ಯುವತಿ ಎಸ್ಕೇಪ್ ಆದ ನಂತರವು ಬಾವ ಅರುಣ್, ಸಂತೋಷ್​ನಿಂದ ಹಣ ಪೀಕಿದ್ದು, ಕಿಲಾಡಿ ಯುವತಿ, ಆಕೆಯ ಅಕ್ಕ ಮತ್ತು ಬಾವನ ವಿರುದ್ಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಸಂತೋಷ್​ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಎಫ್​ಐಆರ್​ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net