ಒಂದೇ ಕುಟುಂಬದ ನಾಲ್ವರ ಸಾವು; ರಾತ್ರಿ ಮಲಗಿದ್ದವರು ಬೆಳಗ್ಗೆ ಶವವಾಗಿ ಪತ್ತೆ!

Untitled design - 2023-09-17T105708.446
Published on

ದೊಡ್ಡಬಳ್ಳಾಪುರ: ರಾತ್ರಿ ಮಲಗಿದ್ದ ಒಂದೇ ಕುಟುಂಬದ ನಾಲ್ವರು ಬೆಳಗ್ಗೆ ಶವವಾಗಿ ಪತ್ತೆಯಾದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೊಲೆಯರಹಳ್ಳಿಯಲ್ಲಿ ವರದಿಯಾಗಿದೆ.

ಕೋಳಿ ಫಾರಂನಲ್ಲಿ ರಾತ್ರಿ ಮಲಗಿದ್ದ ಒಂದೇ ಕುಟುಂಬದ ನಾಲ್ವರು ಬೆಳಗ್ಗೆ ಶವವಾಗಿ ಪತ್ತೆಯಾದ ಸುದ್ದಿ ಕೇಳಿ ಇಡೀ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದವರು ನೇಪಾಳ ಮೂಲದವರು ಎಂದು ಹೇಳಲಾಗಿದೆ.

ಕಾಲೆ ಸರೆರಾ (60), ಲಕ್ಷ್ಮಿ ಸರೇರಾ (50), ಉಷಾ ಸರೇರಾ (40), ಮತ್ತು ಪೊಲ್ ಸರೇರಾ (16) ಮೃತ ದುರ್ದೈವಿಗಳು‌. ಕಳೆದ 8 ದಿನಗಳಿಂದಷ್ಟೆ ಕೆಲಸ ಹರಸಿ ದೊಡ್ಡಬಳ್ಳಾಪುರಕ್ಕೆ ಬಂದಿದ್ದ ಈ ಕುಟುಂಬ, ಇದೀಗ ಅನುಮಾನಸ್ಪದ ರೀತಿಯಲ್ಲಿ ಸಾವಿಗೀಡಾಗಿದೆ.

ಕೋಳಿ ಫಾರಂ‌ನಲ್ಲಿ ಉದ್ಯೋಗ ಮಾಡಿ, ಜೀವನ ಸಾಗಿಸಲು ಬಂದಿದ್ದ ನಾಲ್ವರು, ಎಂದಿನಂತೆ ರಾತ್ರಿ ಶೆಡ್ ಬಾಗಿಲು ಮುಚ್ಚಿ ಮಲಗಿದ್ದರು. ಬೆಳಗ್ಗೆಯಾದರೂ ಹೊರಗೆ ಬಾರದ ಕಾರಣ, ಸ್ಥಳೀಯರು ಡೋರ್ ತೆರೆದು ನೋಡಿದಾಗ ಅವರೆಲ್ಲರೂ ಶವವಾಗಿ ಪತ್ತೆಯಾಗಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಾಲ್ವರ ಸಾವಿಗೆ ನಿಖರ ಕಾರಣವೇನು ಎಂಬುದು ಇಲ್ಲಿಯವರೆಗೂ ತಿಳಿದು ಬಂದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net