ಜೂ. 7ರಂದು ಹಸೆಮಣೆ ಏರಬೇಕಿದ್ದ ಯುವಕ ದುರಂತ ಸಾವು: ಮಧ್ಯರಾತ್ರಿ ನಡೆಯಿತು ಘೋರ ಕೃತ್ಯ!

Hubli Bridegroom
Published on

ಹುಬ್ಬಳ್ಳಿ: ಕೇವಲ ಐದು ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವಕನೊಬ್ಬ ಕೊಲೆಯಾಗಿರುವ ಆತಂಕಕಾರಿ ಘಟನೆ ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದಲ್ಲಿ ನಡೆದಿದೆ.

ನಿಂಗಪ್ಪ ಬೂದಪ್ಪ ನವಲೂರ (28) ಕೊಲೆಯಾದ ಮದುಮಗ. ತೋಟದ ಮನೆಯಲ್ಲಿ ಮಲಗಿದ್ದ ಸಮಯದಲ್ಲಿ ಕಣ್ಣಿಗೆ ಖಾರದಪುಡಿ ಎರಚಿ, ಕತ್ತು ಹಿಸುಕಿ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ನಿಂಗಪ್ಪ ಜೂನ್​ 7 ರಂದು ಹಸೆ ಮಣೆ ಏರಬೇಕಿತ್ತು. ತಾವರಗೆರೆ ಗ್ರಾಮದ ಯುವತಿ ಜೊತೆ ಆಕೆಯ ಮದುವೆ ನಿಶ್ಚಿಯವಾಗಿತ್ತು. ಮದುವೆ ದಿನ ಹತ್ತಿರ ಬಂದಿದ್ದರಿಂದ ನಿಂಗಪ್ಪ ಅವರ ಮನೆಯಲ್ಲಿ ಎಲ್ಲ ತಯಾರಿಗಳು ನಡೆಯುತ್ತಿದ್ದವು. ಆದರೆ, ಇದೀಗ ನಿಂಗಪ್ಪನ ಹತ್ಯೆಯಾಗಿರುವುದು ಕುಟುಂಬಕ್ಕೆ ಭಾರೀ ಆಘಾತವಾಗಿದೆ. ಮಗನನ್ನು ಕಳೆದುಕೊಂಡ ಪಾಲಕರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಇನ್ನು ಕೊಲೆಗೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಕಲಘಟಗಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net