

ವಿಜಯಪುರ: ಐತಿಹಾಸಿಕ ಗೋಳಗುಮ್ಮಟದ ಒಳಗೆ ವೀಕ್ಷಣೆ ಮಾಡುತ್ತಿರುವಾಗಲೇ ಯುವತಿಯೊಬ್ಬಳು ಕೆಳಕ್ಕೆ ಬಿದ್ದಿದ್ದಾಳೆ. ಪರಿಣಾಮವಾಗಿ, ಗೋಳಗುಮ್ಮಟದೊಳಗಿಂದ ಪ್ರಾಣಪಕ್ಷಿ ಹಾರಿಹೋದಂತಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದ್ದು, ಬೆಂಗಳೂರಿನ ಯುವತಿ ಪ್ರಾಣ ಕಳೆದುಕೊಂಡಿದ್ದಾಳೆ.
ಬೆಂಗಳೂರಿನ ಸೌಂದರ್ಯ (19) ಇಂದು ಮಧ್ಯಾಹ್ನ ಗೋಳಗುಮ್ಮಟದ ಒಳಗೆ ವೀಕ್ಷಣೆ ನಡೆಸುತ್ತಿದ್ದಾಗ ಈ ಪ್ರಕರಣ ನಡೆದಿದೆ. ಗೋಳಗುಮ್ಮಟ ವೀಕ್ಷಣೆಗಾಗಿ ಬಂದಿದ್ದ ಸೌಂದರ್ಯ, ಗುಮ್ಮಟದ ಗ್ಯಾಲರಿಯಲ್ಲಿ ಸುತ್ತಾಡಿದ್ದು ಒಳಭಾಗದಿಂದ ಕೆಳಗೆ ಬಿದ್ದು ಅಸುನೀಗಿದ್ದಾಳೆ.
ಅವಘಡ ಹೇಗೆ ಸಂಭವಿಸಿತು ಎಂಬ ಬಗ್ಗೆ ನಿಖರವಾದ ಕಾರಣ ಇನ್ನೂ ಖಚಿತವಾಗಿ ತಿಳಿದು ಬಂದಿಲ್ಲ. ಸ್ಥಳಕ್ಕೆ ಗೋಳಗುಮ್ಮಟ ಠಾಣೆ ಪೊಲೀಸರು ದೌಡಾಯಿಸಿದ್ದು ಮಾಹಿತಿ ಕಲೆ ಹಾಕುತ್ತಿದ್ದಾರೆ.