More

    ಮೂವರು ವಿವಾಹಿತ ಶಿಕ್ಷಕರ ನಡುವಿನ ಪ್ರೀತಿಗೆ ವಿದ್ಯಾರ್ಥಿ ಬಲಿ; ಇಬ್ಬಿಬ್ಬರೊಂದಿಗಿದ್ದ ಅಮ್ಮನ ಸಲುಗೆ ಮಗನಿಗೇ ಮುಳುವಾಯ್ತು!

    ಗದಗ: ಮೂವರು ವಿವಾಹಿತ ಶಿಕ್ಷರ ಪ್ರೀತಿಗೆ ವಿದ್ಯಾರ್ಥಿ ಬಲಿ ಆಗಿದ್ದಾನೆ. ಅದರಲ್ಲೂ ಇಬ್ಬಿಬ್ಬರೊಂದಿಗಿದ್ದ ಅಮ್ಮನ ಸಲುಗೆ ಮಗನಿಗೇ ಮುಳುವಾಗಿದೆ. ಅಮ್ಮನೊಂದಿಗೆ ಸಲುಗೆಯಿಂದಿದ್ದ ಇಬ್ಬರು ಶಿಕ್ಷಕರ ಪೈಕಿ ಒಬ್ಬ ಆಕೆಯ ಮಗನನ್ನು ಭೀಕರವಾಗಿ ಕೊಲೆ ಮಾಡಿ ಕ್ರೌರ್ಯ ತೋರಿದ್ದಾನೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ ಈ ಘಟನೆ ನಡೆದಿತ್ತು. ಸಹಶಿಕ್ಷಕಿ ಗೀತಾ ಎಂಬಾಕೆಯ ಪುತ್ರ ಭರತ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ. ಭರತ್​​ಗೆ ಸಲಿಕೆಯಿಂದ ಹೊಡೆದು, ಶಾಲೆಯ ಒಂದನೇ ಮಹಡಿಯಿಂದ ಕೆಳಗೆ ಎಸೆದಿದ್ದ. ರಕ್ಷಣೆಗೆ ಧಾವಿಸಿದ್ದ ಗೀತಾ ಹಾಗೂ ಇನ್ನೊಬ್ಬ ಶಿಕ್ಷಕ ಸಂಗನಗೌಡ ಪಾಟೀಲ್ ಮೇಲೂ ಹಲ್ಲೆ ಮಾಡಿದ್ದ.

    ಅತಿಥಿ ಶಿಕ್ಷಕಿ ಗೀತಾ, ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ ಜತೆ ಸಲುಗೆಯಿಂದ ಇದ್ದಳು. ಮಾತ್ರವಲ್ಲ ಇನ್ನೊಬ್ಬ ಅತಿಥಿ ಶಿಕ್ಷಕ ಸಂಗನಗೌಡ ಪಾಟೀಲ್ ಜತೆಗೂ ಈಕೆ ಸಲುಗೆಯಿಂದಿದ್ದಳು. ಮುತ್ತಪ್ಪನ ಜತೆ ಗೀತಾ ವಾಟ್ಸ್​ಆ್ಯಪ್ ಚಾಟ್ ಮಾಡುತ್ತಿದ್ದಳು. ಆದರೆ ಈಕೆ ಸಂಗನಗೌಡ ಪಾಟೀಲ್ ಜತೆ ಸಲುಗೆಯಿಂದ ಇರುವುದು ಮುತ್ತಪ್ಪನಿಗೆ ಇಷ್ಟವಾಗುತ್ತಿರಲಿಲ್ಲ. ಅದಾಗ್ಯೂ ಇತ್ತಿಚೆಗೆ ಶೈಕ್ಷಣಿಕ ಪ್ರವಾಸಕ್ಕೆ ಹೋದಾಗ ಸಂಗನಗೌಡ ಹಾಗೂ ಗೀತಾ ಸಲುಗೆಯನ್ನು ಗಮನಿಸಿದ್ದ ಮುತ್ತಪ್ಪ, ಅವರಿಬ್ಬರನ್ನೂ ಕೊಲೆ ಮಾಡಲು ಸಂಚು ಹೂಡಿದ್ದ. ಇದೇ ಯೋಚನೆಯಲ್ಲಿ ಭರತ್ ಹಾಗೂ ಗೀತಾ ಮೇಲೆ ಹಲ್ಲೆ ಮಾಡಿದ್ದ.

    ಈ ಪ್ರಕರಣ ಸಂಬಂಧ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿಕ್ಷಕ ಮುತ್ತಪ್ಪ ಹಡಗಲಿಯನ್ನು ಪೊಲೀಸರ ವಿಶೇಷ ತಂಡ ಸವದತ್ತಿಯಲ್ಲಿ ಬಂಧಿಸಿದೆ. ಬಾಲಕ ಭರತ್ ಸಾವಿಗೀಡಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಗೀತಾ ಪರಿಸ್ಥಿತಿ ಚಿಂತಾಜನಕವಾಗಿದೆ. ಮುತ್ತಪ್ಪ ಹಡಗಲಿ, ಗೀತಾ, ಸಂಗನಗೌಡ ಪಾಟೀಲ್ ಮೂವರೂ ವಿವಾಹಿತರು ಎಂದು ಗದಗ ಎಸ್​ಪಿ ಶಿವಪ್ರಕಾಶ್ ದೇವರಾಜು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

    400 ರೂ. ದುಡಿಯುವ ದಿನಗೂಲಿಯ ಮನೆಗೆ ಐಟಿ ನೋಟಿಸ್; 14 ಕೋಟಿ ರೂ. ಬಾಕಿ ಇದೆ ಎಂದ ಆದಾಯ ತೆರಿಗೆ ಅಧಿಕಾರಿಗಳು!

    ಬಾಲಕನ ಕಣ್ಮುಂದೆಯೇ ತಾಯಿ-ಸಹೋದರಿ ಸಾವು; ಮಗಳನ್ನು ರಕ್ಷಿಸಲು ಅಮ್ಮ ಧಾವಿಸಿದ್ದಾಗ ನಡೆದ ದುರಂತ

    ಅಂಗವಿಕಲ ಮಗಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ ತಾಯಿ; ವರ್ಷದ ಹಿಂದೆ ಪತಿ-ಮಗುವನ್ನು ಕಳೆದುಕೊಂಡಿದ್ದ ಮಹಿಳೆ!

    ಗುಟ್ಟಾಗಿ ಸೊಸೆಯ ಬೆಡ್​ರೂಮ್​ಗೆ ಹೋಗುತ್ತಿದ್ದ ಅತ್ತೆ; ಪ್ರೆಗ್ನೆನ್ಸಿ ಟೆಸ್ಟ್​ ಪಾಸಿಟಿವ್ ಪತ್ತೆ!; ನಿಜಕ್ಕೂ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts