More

    400 ರೂ. ದುಡಿಯುವ ದಿನಗೂಲಿಯ ಮನೆಗೆ ಐಟಿ ನೋಟಿಸ್; 14 ಕೋಟಿ ರೂ. ಬಾಕಿ ಇದೆ ಎಂದ ಆದಾಯ ತೆರಿಗೆ ಅಧಿಕಾರಿಗಳು!

    ಬಿಹಾರ: ಕೋಟ್ಯಧಿಪತಿಗಳ ಮನೆಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡುವುದು, ಐಟಿ ನೋಟಿಸ್ ನೀಡುವುದು ಹೊಸದೇನಲ್ಲ. ಆದರೆ ಇಲ್ಲೊಂದು ಕಡೆ ದಿನಕ್ಕೆ 400 ರೂ. ದುಡಿಯುವ ದಿನಗೂಲಿಯ ಮನೆಗೆ ಐಟಿ ಅಧಿಕಾರಿಗಳು ತೆರಳಿದ್ದಲ್ಲದೆ, 14 ಕೋಟಿ ರೂ. ರಿಟರ್ನ್ಸ್ ಬಾಕಿ ಎಂದು ನೋಟಿಸ್ ಕೂಡ ನೀಡಿದ್ದಾರೆ.

    ಬಿಹಾರದ ರೋಹ್ಟಸ್ ಜಿಲ್ಲೆಯ ಕರ್ಗರ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ, ದಿನಗೂಲಿಯಾಗಿ ಕೆಲಸ ಮಾಡುತ್ತಿರುವ ಮನೋಜ್ ಯಾದವ್ ಎಂಬಾತನ ಮನೆಗೆ ಸೋಮವಾರ ಬಂದಿದ್ದ ಆದಾಯ ತೆರಿಗೆ ಅಧಿಕಾರಿಗಳು, 14 ಕೋಟಿ ರೂ. ರಿಟರ್ನ್ಸ್​ ಬಾಕಿ ಇದೆ ಪಾವತಿಸಿ ಎಂದು ನೋಟಿಸ್ ನೀಡಿದ್ದಾರೆ.

    ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಈ ನಡೆಯಿಂದ ಮನೋಜ್ ಯಾದವ್ ಮಾತ್ರವಲ್ಲದೆ, ಅವರ ಕುಟುಂಬಸ್ಥರು, ಊರವರು ಕೂಡ ಅಚ್ಚರಿಗೊಂಡಿದ್ದಾರೆ. ನನ್ನಲ್ಲಿರುವ ಎಲ್ಲ ಆಸ್ತಿಯನ್ನು ಮಾರಿದರೂ 14 ಕೋಟಿ ರೂ. ಆಗುವುದಿಲ್ಲ ಎಂದು ಮನೋಜ್ ಯಾದವ್ ತನ್ನ ಪರಿಸ್ಥಿತಿಯನ್ನು ಹೇಳಿದ್ದರೂ ಐಟಿ ಅಧಿಕಾರಿಗಳು ನಂಬಿಲ್ಲ ಎನ್ನಲಾಗಿದೆ. ಬ್ಯಾಂಕ್ ದಾಖಲೆಗಳ ಪ್ರಕಾರ ಮನೋಜ್ ಹೆಸರಲ್ಲಿ ಕಂಪನಿಗಳು ನಡೆಯುತ್ತಿದ್ದು, ಅದರ ಬಾಬ್ತು 14 ಕೋಟಿ ರೂ. ತೆರಿಗೆ ಬಾಕಿ ಇದೆ ಎಂದು ಅಧಿಕಾರಿಗಳು ಹೇಳಿದ್ದು ಮನೋಜ್​ ದಿಗಿಲಾಗುವಂತೆ ಮಾಡಿದೆ.

    ಮನೋಜ್ ಈ ಮೊದಲು ದೆಹಲಿ, ಹರಿಯಾಣ ಹಾಗೂ ಪಂಜಾಬ್​ಗಳಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ್ದು, ಕೋವಿಡ್ ಲಾಕ್​ಡೌನ್​ ಹಿನ್ನೆಲೆಯಲ್ಲಿ 2020ರಲ್ಲಿ ಬಿಹಾರಕ್ಕೆ ಮರಳಿ ದಿನಗೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ. ತಾನು ಹಿಂದೆ ಕೆಲಸ ಮಾಡಿದ್ದ ಕಂಪನಿಗಳವರು ನನ್ನ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ವಂಚನೆ ನಡೆಸಿರಬಹುದು, ಕೆಲಸಕ್ಕೆ ಸೇರುವ ಸಮಯದಲ್ಲಿ ಅವರು ನನ್ನ ಪಾನ್ ಮತ್ತು ಆಧಾರ್ ಕಾರ್ಡ್ ಪ್ರತಿಗಳನ್ನು ಪಡೆದಿದ್ದರು ಎಂಬುದಾಗಿ ಮನೋಜ್ ಹೇಳಿದ್ದಾನೆ.

    ಅಂಗವಿಕಲ ಮಗಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ ತಾಯಿ; ವರ್ಷದ ಹಿಂದೆ ಪತಿ-ಮಗುವನ್ನು ಕಳೆದುಕೊಂಡಿದ್ದ ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts