ನವದೆಹಲಿ: ಅತ್ತೆಯೊಬ್ಬಳು ಸೊಸೆಯ ಬೆಡ್ರೂಮ್ಗೆ ಗುಟ್ಟಾಗಿ ಹೋಗುತ್ತಿದ್ದ ಹಾಗೂ ಸೊಸೆಯ ಮಲಗುವ ಕೋಣೆಯಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಪಾಸಿಟಿವ್ ಆಗಿರುವುದು ಕೂಡ ಪತ್ತೆಯಾಗಿರುವ ಸಂಗತಿಯೊಂದು ನಡೆದಿದೆ. ಪ್ರಕರಣದ ಹಿಂದಿನ ಅಸಲಿಯತ್ತು ವಿಚಿತ್ರವಾಗಿದ್ದು, ಇದು ಬಹುಶಃ ಇದುವರೆಗೆ ಯಾವ ಸೊಸೆಯೂ ಮಾಡಿರದ ತಂತ್ರವೆಂದರೂ ತಪ್ಪೇನಲ್ಲ.
ತನ್ನ ತಂತ್ರದ ಬಗ್ಗೆ ಖುದ್ದು ಸೊಸೆಯೇ ಸೋಷಿಯಲ್ ಮೀಡಿಯಾ ಆ್ಯಪ್ ರೆಡ್ಡಿಟ್ನಲ್ಲಿ ವಿವರವಾಗಿ ಹೇಳಿಕೊಂಡಿದ್ದಾಳೆ. ಅಷ್ಟಕ್ಕೂ ಅತ್ತೆಯ ಬೇಹುಗಾರಿಕೆಯನ್ನು ಪತ್ತೆ ಮಾಡಲು ಸೊಸೆ ಈ ತಂತ್ರ ಹೂಡಿದ್ದು, ಅದರಲ್ಲಿ ಆಕೆ ಯಶಸ್ವಿಯಾಗಿದ್ದು, ಅತ್ತೆ ಸಿಕ್ಕಿಬಿದ್ದಿರುವ ಬೆಳವಣಿಗೆಯೂ ನಡೆದಿದೆ.
ಒಂದು ತಿಂಗಳ ಹಿಂದೆ ನಮ್ಮ ಮನೆಗೆ ಅತ್ತೆ ಬಂದು ನೆಲೆಸಿದ್ದು, ಆಕೆ ಬಂದ ಬಳಿಕ ನನ್ನ ಬೆಡ್ರೂಮ್ಗೆ ಬೇರೆ ಯಾರೋ ಬಂದು ಹೋಗಿರುವುದು ನಡೆಯುತ್ತಿದೆ. ಮಾತ್ರವಲ್ಲ, ಅಲ್ಲಿರುವ ವಸ್ತುಗಳು ಸ್ಥಾನಪಲ್ಲಟ ಆಗಿರುವುದು ಕೂಡ ಕಂಡುಬರುತ್ತಿದೆ. ನಾನು ಹಾಗೂ ನನ್ನ ಪತಿ ಬಿಟ್ಟರೆ ನನ್ನ ಬೆಡ್ರೂಮ್ಗೆ ಯಾರೂ ಪ್ರವೇಶ ಮಾಡುವುದಿಲ್ಲ. ಅದಾಗ್ಯೂ ಅತ್ತೆ ಗುಟ್ಟಾಗಿ ನನ್ನ ಬೆಡ್ರೂಮ್ಗೆ ಹೊಕ್ಕು ಕದ್ದು ಮುಚ್ಚಿ ನೋಡುವುದು ಗೊತ್ತಾಗಿದೆ. ಆದರೆ ಈ ಬಗ್ಗೆ ಪತಿಗೆ ಹೇಳಿದರೆ ಅವರು ಒಪ್ಪುವ ಸ್ಥಿತಿಯಲ್ಲಿರಲಿಲ್ಲ. ಅದನ್ನು ಪತ್ತೆ ಮಾಡಿ ತೋರಿಸಲು ಸಿಸಿಟಿವಿ ಕ್ಯಾಮರಾವನ್ನು ಒಪ್ಪಿಗೆ ಇಲ್ಲದೆ ಅಳವಡಿಸುವಂತೆಯೂ ಇರಲಿಲ್ಲ ಎಂದಿರುವ ಸೊಸೆ, ನಂತರ ತಾನು ಮಾಡಿದ ತಂತ್ರ ಏನು ಎಂಬುದನ್ನು ಹೇಳಿಕೊಂಡಿದ್ದಾಳೆ.
ಒಂದು ದಿನ ಪ್ರೆಗ್ನೆನ್ಸಿ ಟೆಸ್ಟ್ ಪಾಸಿಟಿವ್ ಬರುವಂತೆ ನಕಲಿ ಪರೀಕ್ಷೆ ಮಾಡಿ ಆ ಸ್ಲೈಡನ್ನು ಬೆಡ್ರೂಮ್ನ ಕಸದಬುಟ್ಟಿಯಲ್ಲಿ ಎದ್ದು ಕಾಣುವ ರೀತಿಯಲ್ಲಿ ಹಾಕಿಟ್ಟಿದ್ದೆ. ನಂತರ ನಾನು ಆಫೀಸಿಗೆ ಬರುತ್ತಿದ್ದಂತೆ ಗರ್ಭಿಣಿ ಆಗಿರುವ ಕುರಿತು ಸಂಬಂಧಿಕರು ಕರೆ ಮಾಡಿ ಶುಭ ಹಾರೈಸಲಾರಂಭಿಸಿದ್ದರು. ಪತಿಗೂ ಈ ವಿಷಯ ತಲುಪಿದ್ದು, ಅವರು ಇಂಥ ವಿಷಯ ನನಗೆ ತಿಳಿಸದೆ ಏಕೆ ಮುಚ್ಚಿಟ್ಟೆ ಎಂದು ಗದರಿದರು. ಆಗ ನಾನು ಅತ್ತೆ ಬೆಡ್ರೂಮ್ನಲ್ಲಿ ಬೇಹುಗಾರಿಕೆ ಮಾಡುತ್ತಿರುವುದನ್ನು ಪತ್ತೆ ಮಾಡಲೆಂದೇ ಈ ತಂತ್ರ ಮಾಡಿದ್ದೆ ಎಂದು ಸತ್ಯವನ್ನು ಹೇಳಿದೆ. ಆದರೆ ಅದನ್ನು ನಂಬದ ಅವರು ಅವರೆದುರೇ ಮತ್ತೊಮ್ಮೆ ಟೆಸ್ಟ್ ಮಾಡಬೇಕು ಎಂದು ಪರೀಕ್ಷೆ ಮಾಡಿಸಿಕೊಂಡರು. ಆಗ ಪ್ರೆಗ್ನೆನ್ಸಿ ಟೆಸ್ಟ್ ಪಾಸಿಟಿವ್ ಎಂಬುದು ನಕಲಿ ಎಂಬುದನ್ನು ಒಪ್ಪಿದರಾದರೂ ಆ ಬಳಿಕ ನನ್ನ ಅತ್ತೆ ಹಾಗೂ ಆಕೆಯ ಸಂಬಂಧಿಕರು ನನ್ನನ್ನು ಸುಳ್ಳುಗಾತಿ, ಕುತಂತ್ರಿ ಎಂದು ಕರೆಯುತ್ತಿದ್ದಾರೆ ಎಂಬುದಾಗಿ ಈ ಮಹಿಳೆ ರೆಡಿಟ್ನಲ್ಲಿ ಹೇಳಿಕೊಂಡಿದ್ದಾಳೆ. –ಏಜೆನ್ಸೀಸ್
ಮಾರಣಾಂತಿಕ ಮೇಲ್ಸೇತುವೆ: ಮುಗಿಯದ ಫ್ಲೈಓವರ್ನಲ್ಲಿ ಮುಗಿದೇ ಹೋಯ್ತು ಬದುಕು; ದಂಪತಿ ಸಾವು, ಪುತ್ರಿಯ ಪರಿಸ್ಥಿತಿ ಗಂಭೀರ
ಬೇಕರಿ ಪ್ರಕರಣದ ಹಿಂದೆ ಸುಪಾರಿ!; ಎಲ್ಲ ಆರೋಪಿಗಳನ್ನೂ ಬಂಧಿಸುವಂತೆ ಆಗ್ರಹ, ತಪ್ಪಿದರೆ ಮತ್ತೆ ಪ್ರತಿಭಟನೆ ಎಚ್ಚರಿಕೆ
ರೈಲ್ವೇ ಪ್ಲ್ಯಾಟ್ಫಾರ್ಮ್ನಲ್ಲೇ ಬಿದ್ದಿತ್ತು 100 ಗ್ರಾಂ ಚಿನ್ನಾಭರಣವಿದ್ದ ಬಾಕ್ಸ್; ಆಮೇಲಾಗಿದ್ದೇನು?