More

    ಶೀಘ್ರದಲ್ಲೇ ಮುಖೇಶ್- ನೀತಾ ಅಂಬಾನಿ ಸೊಸೆಯಾಗುವ ರಾಧಿಕಾ ಮರ್ಚೆಂಟ್ ಯಾರು?

    ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ಶೀಘ್ರದಲ್ಲೇ ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾಗಲಿದ್ದಾರೆ. ಅವರ ಮದುವೆಯ ಪೂರ್ವ ಸಂಭ್ರಮದ (pre-wedding festivities) ಆಮಂತ್ರಣ ಪತ್ರಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

    ರಾಧಿಕಾ ಮತ್ತು ಅನಂತ್ ಅವರ ವಿವಾಹ ಪೂರ್ವ ಸಂಭ್ರಮಗಳು ಮಾರ್ಚ್ 1 ರಂದು ಜಾಮ್‌ನಗರದಲ್ಲಿ ಪ್ರಾರಂಭವಾಗಲಿದ್ದು, ಮಾರ್ಚ್ 3 ರಂದು ಮುಕ್ತಾಯಗೊಳ್ಳಲಿವೆ ಎಂದು ಆಹ್ವಾನದಲ್ಲಿ ತಿಳಿಸಲಾಗಿದೆ.

    “ಶ್ರೀಮತಿ ಕೋಕಿಲಾಬೆನ್ ಮತ್ತು ಶ್ರೀ ಧೀರೂಭಾಯಿ ಅಂಬಾನಿ, ಶ್ರೀಮತಿ ಪೂರ್ಣಿಮಾಬೆನ್ ಮತ್ತು ಶ್ರೀ ರವೀಂದ್ರಭಾಯಿ ದಲಾಲ್ ಅವರ ಆಶೀರ್ವಾದದೊಂದಿಗೆ, ರಾಧಿಕಾ ಅವರೊಂದಿಗೆ ನಮ್ಮ ಮಗ ಅನಂತ್ ಅವರ ವಿವಾಹಪೂರ್ವ ಆಚರಣೆಗಳಿಗೆ ನಿಮ್ಮನ್ನು ಆಹ್ವಾನಿಸಲು ನಾವು ಸಂತೋಷಪಡುತ್ತೇವೆ” ಎಂದು ಆಮಂತ್ರಣದಲ್ಲಿ ಬರೆಯಲಾಗಿದೆ.

    ರಾಧಿಕಾ ಮರ್ಚೆಂಟ್ ಯಾರು?:

    ರಾಧಿಕಾ ಮರ್ಚೆಂಟ್ ಅವರು ಡಿಸೆಂಬರ್ 18, 1994 ರಂದು ಮುಂಬೈನಲ್ಲಿ ಜನಿಸಿದರು. ಅವರು ಪ್ರಮುಖ ಔಷಧೀಯ ಕಂಪನಿಯಾದ ಎನ್ಕೋರ್ ಹೆಲ್ತ್‌ಕೇರ್‌ನ ಸಿಇಒ ವಿರೇನ್ ಮರ್ಚೆಂಟ್ ಅವರ ಪುತ್ರಿ. ಅವರ ತಾಯಿ ಶೈಲಾ ಮರ್ಚೆಂಟ್.

    ರಾಧಿಕಾ ಮರ್ಚಂಟ್ ಅವರು ಮುಂಬೈನ ಕ್ಯಾಥೆಡ್ರಲ್ ಮತ್ತು ಜಾನ್ ಕಾನನ್ ಸ್ಕೂಲ್, ಎಕೋಲ್ ಮೊಂಡಿಯೇಲ್ ವರ್ಲ್ಡ್ ಸ್ಕೂಲ್​ನಲ್ಲಿ ವ್ಯಾಸಂಗ ಮಾಡಿದ್ದಾರೆ. ಬಿ.ಡಿ. ಸೋಮಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಿಂದ ಇಂಟರ್​ನ್ಯಾಷನಲ್ ಬ್ಯಾಕಲೌರಿಯೇಟ್ ಡಿಪ್ಲೊಮಾವನ್ನು ಪೂರ್ಣಗೊಳಿಸಿದ್ದಾರೆ. ಅವರು ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಮತ್ತು ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿ, 2017ರಲ್ಲಿ ಪದವಿ ಪಡೆದಿದ್ದಾರೆ.

    ಅವರು ಸಲಹಾ ಸಂಸ್ಥೆ ದೇಸಾಯಿ ಮತ್ತು ದಿವಾನ್‌ಜಿ ಜತೆ ತಮ್ಮ ವೃತ್ತಿಪರ ಪ್ರಯಾಣವನ್ನು ಪ್ರಾರಂಭಿಸಿದರು. ನಂತರ ಅವರು ಮುಂಬೈ ಮೂಲದ ರಿಯಲ್ ಎಸ್ಟೇಟ್ ಕಂಪನಿಯಾದ ಇಸ್ಪ್ರವಾದಲ್ಲಿ ಜೂನಿಯರ್ ಸೇಲ್ಸ್ ಮ್ಯಾನೇಜರ್ ಆಗಿ ಸೇರಿಕೊಂಡರು. ಪ್ರಸ್ತುತ ಅವರು ಎನ್ಕೋರ್ ಹೆಲ್ತ್‌ಕೇರ್‌ನಲ್ಲಿ ನಿರ್ದೇಶಕರಾಗಿದ್ದಾರೆ.

    ಅವರು ನುರಿತ ಭರತನಾಟ್ಯ ನೃತ್ಯಗಾರ್ತಿಯಾಗಿದ್ದಾರೆ, ಮುಂಬೈ ಮೂಲದ ಡ್ಯಾನ್ಸ್ ಅಕಾಡೆಮಿ ಶ್ರೀ ನಿಭಾ ಆರ್ಟ್ಸ್‌ನಿಂದ ಗುರು ಭಾವನಾ ಠಕ್ಕರ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. ಅವರು 2022 ರಲ್ಲಿ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆದ ಅರಂಗೇಟ್ರಂ ಸಮಾರಂಭದಲ್ಲಿ ಪ್ರದರ್ಶನ ನೀಡಿದರು.

    ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಅವರು ಡಿಸೆಂಬರ್ 2022 ರಲ್ಲಿ ತಮ್ಮ ರೋಕಾ ಸಮಾರಂಭದ ನಂತರ ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀನಾಥ್‌ಜಿ ದೇವಸ್ಥಾನದಲ್ಲಿ ಉಂಗುರಗಳನ್ನು ಬದಲಾಯಿಸಿಕೊಂಡರು. ಅವರ ನಿಶ್ಚಿತಾರ್ಥವು 2023ರ ಜನವರಿಯಲ್ಲಿ ಮುಂಬೈನಲ್ಲಿರುವ ಅಂಬಾನಿಯವರ ಸಾಂಪ್ರದಾಯಿಕ ಮನೆಯಾದ ಆಂಟಿಲಿಯಾದಲ್ಲಿ ನಡೆಯಿತು.

    ವಿಕಲಚೇತನ ಕ್ರಿಕೆಟರ್​ಗೆ ಗೌತಮ್​ ಅದಾನಿ ನೆರವು: ಎರಡೂ ಕೈಗಳಿಲ್ಲದ ಈ ಆಟಗಾರ ಹೇಗೆ ಬೌಲಿಂಗ್​, ಬ್ಯಾಟಿಂಗ್​ ಮಾಡುತ್ತಾರೆ?

    ಕಳೆದ ವರ್ಷ ಪ್ರತಿ ಷೇರಿಗೆ ಶೇಕಡಾ 500 ಲಾಭಾಂಶ ನೀಡಿದ ಕಂಪನಿ ಮತ್ತೆ ಡಿವಿಡೆಂಡ್​ ನೀಡಲು ಸಜ್ಜು

    ದೆಹಲಿಯನ್ನು ಹಿಂದಿಕ್ಕಿ ಮುಂಚೂಣಿಯಲ್ಲಿ ರಾಜ್ಯದ ರಾಜಧಾನಿ: ಬೆಂಗಳೂರು ಈಗ ಕಾರುಗಳ ನಗರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts