More

    ಜೈಲಲ್ಲಿ 63 ಕೈದಿಗಳಿಗೆ ಏಡ್ಸ್​: ಇಷ್ಟು ದೊಡ್ಡಮಟ್ಟದಲ್ಲಿ ವೈರಸ್ ತಗುಲಿರುವುದಕ್ಕೆ ಕಾರಣ ಹೀಗಿದೆ ನೋಡಿ..

    ಲಖನೌ: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿರುವ 36 ಕೈದಿಗಳಿಗೆ ಹೊಸದಾಗಿ ಎಚ್‌ಐವಿ ಪಾಸಿಟಿವ್ ಇರುವುದು ಪತ್ತೆಯಾಗಿದ್ದು, ಇದರೊಂದಿಗೆ ಜೈಲಿನಲ್ಲಿರುವ ಒಟ್ಟು ಎಚ್‌ಐವಿ ಸೋಂಕಿತ ಕೈದಿಗಳ ಸಂಖ್ಯೆ 63ಕ್ಕೆ ಏರಿಕೆಯಾಗಿದೆ. ಇದು ಭಾರಿ ಸಂಚಲನ ಮೂಡಿಸಿದೆ.

    ಇದನ್ನೂ ಓದಿ: 16 ತಿಂಗಳ ನಂತರ ಚಿನ್ನಕ್ಕೆ ಕೊರಳೊಡ್ಡಿದ ವಿನೇಶ್ ಫೋಗಟ್!

    ಡಿಸೆಂಬರ್‌ನಲ್ಲಿ ನಡೆಸಲಾದ ಪರೀಕ್ಷೆಯಲ್ಲಿ 36 ಜನರಿಗೆ ಈ ವೈರಸ್ ಸೋಂಕು ತಗುಲಿರುವುದು ಕಂಡುಬಂದಿದೆ. ಆದಾಗ್ಯೂ, ವೈರಸ್ ಹರಡಲು ಕಾರಣಗಳು ಸ್ಪಷ್ಟವಾಗಿಲ್ಲ. ಅವರಲ್ಲಿ ಹೆಚ್ಚಿನವರು ಡ್ರಗ್ಸ್ ತೆಗೆದುಕೊಳ್ಳುವ ಅಭ್ಯಾಸವನ್ನು ಹೊಂದಿದ್ದಾರೆ. ಡ್ರಗ್ಸ್ ಅನ್ನು ದೇಹಕ್ಕೆ ಒಂದೇ ಸಿರಿಂಜ್ ಬಳಸಿ ಹಲವರು ತೆಗೆದುಕೊಂಡಿರುವುದರಿಂದ ವೈರಸ್ ಹರಡಿರಬಹುದು ಎಂದು ಅಂದಾಜಿಸಲಾಗಿದೆ.

    ಅವರೆಲ್ಲರಿಗೂ ಜೈಲಿಗೆ ಬರುವುದಕ್ಕಿಂತ ಮೊದಲು ಎಚ್‌ಐವಿ ಸೋಂಕು ತಗುಲಿರಲಿಲ್ಲ ಎಂದು ಹೇಳಲಾಗುತ್ತಿದೆ. ಜೈಲಿಗೆ ಬಂದ ನಂತರ ಕೈದಿಗಳಿಗೆ ಎಚ್‌ಐವಿ ಸೋಂಕು ತಗುಲಿರುವುದಕ್ಕೆ ಜೈಲು ಆಡಳಿತದ ನಿರ್ಲಕ್ಷ್ಯ ಮತ್ತು ಭ್ರಷ್ಟ ವ್ಯವಸ್ಥೆಯೇ ಕಾರಣ ಎನ್ನಲಾಗುತ್ತಿದೆ. ಉತ್ತರ ಪ್ರದೇಶ ಜೈಲಿನ ಅಧಿಕಾರಿಗಳು ಇದಕ್ಕೆ ಕಾರಣಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

    ಏಡ್ಸ್​ ಪೀಡಿತ ಕೈದಿಗಳಿಗೆ ಲಖನೌದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಕಾಲಕಾಲಕ್ಕೆ ಅವರ ಆರೋಗ್ಯ ವಿಚಾರಿಸಲಾಗುತ್ತಿದೆ. ಕಳೆದ ಐದು ವರ್ಷದಲ್ಲಿ ಈ ಜೈಲಿನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಎಚ್‌ಐವಿ ಪ್ರಕರಣಗಳು ವರದಿಯಾಗಿರುವುದು ಇದೇ ಮೊದಲು. ಇದಕ್ಕೆ ಕಾರಣಗಳ ಪತ್ತೆಗೆ ವಿಶೇಷ ತನಿಖೆ ನಡೆಸಲಾಗುತ್ತಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

    ಒಂದೇ ಬಾರಿಗೆ ಭಾರಿ ಸಂಖ್ಯೆಯಲ್ಲಿ ಏಡ್ಸ್​ ಪೀಡಿತರು ಕಂಡುಬಂದಿರುವುದು ಇಲ್ಲಿನ ಇತರ ಕೈದಿಗಳ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಆತಂಕ ಮೂಡಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಾಗದಂತೆ ಆರೋಗ್ಯ ಇಲಾಖೆಯ ಸೂಚನೆಯಂತೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ‘ವಿಶ್ವಂಭರ’ಕ್ಕೆ ಹೀರೋಯಿನ್​ ಫಿಕ್ಸ್​: 18 ವರ್ಷದ ಬಳಿಕ ಚಿರು ಜೊತೆ ಸ್ಟೆಪ್ಸ್​ ಹಾಕ್ತಾರೆ ದಕ್ಷಿಣದ ಖ್ಯಾತ ನಟಿ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts