More

  ‘ವಿಶ್ವಂಭರ’ಕ್ಕೆ ಹೀರೋಯಿನ್​ ಫಿಕ್ಸ್​: 18 ವರ್ಷದ ಬಳಿಕ ಚಿರು ಜೊತೆ ಸ್ಟೆಪ್ಸ್​ ಹಾಕ್ತಾರೆ ದಕ್ಷಿಣದ ಖ್ಯಾತ ನಟಿ?!

  ಹೈದರಾಬಾದ್​: ಪದ್ಮವಿಭೂಷಣ ಮತ್ತು ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಇತ್ತೀಚಿನ ಚಿತ್ರ ‘ವಿಶ್ವಂಭರ’ ಸೆಟ್ಟೇರಿದ್ದು, ಭರದಿಂದ ಚಿತ್ರೀಕರಣ ಆರಂಭವಾಗಿದೆ. ಬಿಂಬಿಸಾರ ಖ್ಯಾತಿಯ ವಶಿಷ್ಠ ಈ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

  ಇದನ್ನೂ ಓದಿ: ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಾಗದ ಎಎಪಿ ನಾಯಕ!

  ಸೋಷಿಯೋ ಫ್ಯಾಂಟಸಿ ಹಿನ್ನಲೆಯಲ್ಲಿ ಈ ಸಿನಿಮಾ ಚಿತ್ರೀಕರಣವಾಗುತ್ತಿದ್ದು, ಯುವಿ ಕ್ರಿಯೇಷನ್ಸ್ ನಿಂದ ಸುಮಾರು 200 ಕೋಟಿ ರೂ. ಬಜೆಟ್‌ನಲ್ಲಿ ಚಿತ್ರ ನಿರ್ಮಾಣವಾಗಲಿದೆ.ಆಸ್ಕರ್ ಪ್ರಶಸ್ತಿ ವಿಜೇತ ಎಂಎಂ ಕೀರವಾಣಿ ಸಂಗೀತ ಸಂಯೋಜನೆಯೊಂದಿಗೆ, ಚಿತ್ರವು 2025 ರ ಸಂಕ್ರಾಂತಿಯಂದು ಬಿಡುಗಡೆಯಾಗಲಿದೆ.

  ಸದ್ಯ ಈ ಚಿತ್ರದ ಚಿತ್ರೀಕರಣ ಶರವೇಗದಲ್ಲಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಈ ಚಿತ್ರದ ಶೂಟಿಂಗ್‌ಗೆ ಚಿರಂಜೀವಿ ಕೂಡ ಸೇರಿಕೊಂಡಿದ್ದರು. ಚಿರಂಜೀವಿ ಈ ಚಿತ್ರಕ್ಕಾಗಿ ದೈಹಿಕವಾಗಿ ಫಿಟ್ ಆಗಿದ್ದಾರೆ. ಇತ್ತೀಚೆಗಷ್ಟೇ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಜಿಮ್ ವಿಡಿಯೋ ವೈರಲ್ ಆಗಿದೆ.
  ಹಾಗಿದ್ದರೆ, ಈ ಚಿತ್ರದ ಬಗ್ಗೆ ನಿರ್ಮಾಪಕರು ಸಖತ್ ಅಪ್‌ಡೇಟ್ ನೀಡಿದ್ದಾರೆ. ಈ ಸಿನಿಮಾದಲ್ಲಿ ಕಾಲಿವುಡ್ ಸ್ಟಾರ್ ಹೀರೋಯಿನ್ ತ್ರಿಷಾ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ಚಿತ್ರತಂಡ ಹೇಳಿದೆ.

  ತ್ರಿಶಾ 18 ವರ್ಷಗಳ ಹಿಂದೆ ಚಿರಂಜೀವಿ ಜೊತೆ ‘ಸ್ಟಾಲಿನ್’ ಸಿನಿಮಾದಲ್ಲಿ ನಟಿಸಿದ್ದರು. ಮತ್ತೆ ಮೆಗಾಸ್ಟಾರ್ ಜೊತೆ ಜೊತೆಯಾಗಲಿದ್ದಾರೆ. ಇದು ನಿಜಕ್ಕೂ ಮೆಗಾಸ್ಟಾರ್​ ಅಭಿಮಾನಿಗಳಿಗೆ ಸಂತಸದ ಸುದ್ದಿ.

  ಓಲಾ, ಊಬರ್​ನಂಥ ಟ್ಯಾಕ್ಸಿಗಳಿಗೆ ಏಕರೂಪ ಪ್ರಯಾಣ ದರ ನಿಗಧಿಪಡಿಸಿದ ಸರ್ಕಾರ: ಪರಿಷ್ಕೃತ ಪಟ್ಟಿ ಇಲ್ಲಿದೆ..

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts