

ಜೈಪುರ: ರಾಜಸ್ಥಾನದ ಜೈಪುರದಲ್ಲಿ ಅಡ್ ಹಾಕ್ ಕಮಿಟಿ ಆಯೋಜಿಸಿದ್ದ ರಾಷ್ಟ್ರೀಯ ಸೀನಿಯರ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ವಿನೇಶ್ ಫೋಗಟ್ ಚಿನ್ನ ಗೆದ್ದರು. ಇತ್ತೀಚೆಗೆ ಆರಂಭವಾದ ಈ ಟೂರ್ನಿಯಲ್ಲಿ ಮಹಿಳೆಯರ 55 ಕೆಜಿ ವಿಭಾಗದಲ್ಲಿ ಅವರು ಮಧ್ಯಪ್ರದೇಶದ ಕುಸ್ತಿಪಟು ಜ್ಯೋತಿ ಅವರನ್ನು 4-0 ಅಂತರದಿಂದ ಸೋಲಿಸಿದರು.
29 ವರ್ಷದ ವಿನೇಶ್ ಪೋಗಟ್ ರೈಲ್ವೇ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ (ಆರ್‌ಎಸ್‌ಪಿಬಿ) ಅನ್ನು ಪ್ರತಿನಿಧಿಸುತ್ತಿದ್ದಾರೆ. ಅವರು 16 ತಿಂಗಳ ಕಾಲ ಕುಸ್ತಿಯಿಂದ ಹೊರಗುಳಿದಿದ್ದಳು. ಕಳೆದ ವರ್ಷ ಲೈಂಗಿಕ ಆರೋಪದ ಹಿನ್ನೆಲೆಯಲ್ಲಿ ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸರಣ್ ಸಿಂಗ್ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಕುಸ್ತಿಪಟುಗಳು ನಡೆಸಿದ ಹೋರಾಟಕ್ಕೆ ವಿನೇಶ್ ನೇತೃತ್ವ ವಹಿಸಿದ್ದರು.
ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತೆಯಾಗಿದ್ದಾರೆ.