ನೀನು ಒಬ್ಬೊಂಟಿಯಾಗಿ ಬಾ... ಎಂದ ಪ್ರಿಯಕರ! ಮಗುವನ್ನೇ ಕೊಂದು ತೆರಳಿದ ಗೆಳತಿ | Girl friend

Untitled design (84)
Published on

Girl friend: ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ತನ್ನ ಅನೈತಿಕ ಸಂಬಂಧಕ್ಕೆ ತನ್ನ ಸ್ವಂತ ಮಗು ಅಡ್ಡಿ ಆಗುತ್ತೆ ಎಂದು 4ರ ಬಾಲಕಿಯನ್ನು ಕೊಂದ ಘಟನೆ ತಮಿಳುನಾಡಿನ ಕೊಯಮ್ಮತ್ತೂರಿನಲ್ಲಿ ಭಾನುವಾರ ನಡೆದಿದೆ.

ಕೊಯಮತ್ತೂರಿನ ಇರುಕೂರಿನ ತಮಿಳರಸಿ (30) ಮತ್ತು ರಘುಪತಿ ಅವರ ಪುತ್ರಿ ಅಪರ್ಣಶ್ರೀ(4) ಮೃತ ಬಾಲಕಿ. ಬಾಲಕಿ ತಾಯಿ ತಮಿಳರಸಿಯನ್ನು ಕೊಲೆ ಆರೋಪದ ಮೇಲೆ ಬಂಧಿಸಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಏನಿದು ಪ್ರಕರಣ..

ತಮಿಳರಸಿ ಮತ್ತು ರಘುಪತಿ ದಂಪತಿಗಳಾಗಿದ್ದು, ಕೆಲ ತಿಂಗಳುಗಳ ಹಿಂದೆ ಕೌಟುಂಬಿಕ ಕಾರಣಗಳಿಂದ ಇಬ್ಬರು ಬೇರ್ಪಟ್ಟಿದ್ದರು. ಈ ಹಿನ್ನೆಲೆ ತಮಿಳರಸಿ ಮಗು ಅಪರ್ಣಶ್ರೀ ಜತೆ ಒಬ್ಬೊಂಟಿಯಾಗಿ ವಾಸ ಮಾಡುತ್ತಿದ್ದಳು. ಅವಳು ಕಟ್ಟಡ ನಿರ್ಮಾಣ ಕೆಲಸಕ್ಕೆ ಹೋಗುತ್ತಿದ್ದಳು. ಆ ಸಮಯದಲ್ಲಿ ತಮಿಳರಸಿ ಧರ್ಮಪುರಿ ಜಿಲ್ಲೆಯ ಬಿಲ್ಡರ್ ವಸಂತ್ ಎಂಬ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳು. ವಿವಾಹೇತರ ಸಂಬಂಧಕ್ಕೆ ಅವನು ಅಡ್ಡಿಯಾಗಿದ್ದಾನೆಂದು ಹೇಳಿ ಮಗುವನ್ನು ಕತ್ತು ಹಿಸುಕಿ ಕೊಂದಳು.

ಆರೋಪಿ ತಮಿಳರಸಿ ತನಿಖೆಯಲ್ಲಿ ಹೇಳಿದ್ದೇನು?

"ನನ್ನ ಪತಿ ಬೇರ್ಪಟ್ಟ ನಂತರ, ನನಗೆ ವಸಂತ್ ಜತೆ ಸಂಬಂಧವಿತ್ತು. ನಾನು ವಸಂತ್ ಅವರನ್ನು ಮದುವೆಯಾಗಲು ನಿರ್ಧರಿಸಿದೆ. ಮಗು ಇದ್ದರೆ ಇದಕ್ಕೆ ಅವರು ಒಪ್ಪಲ್ಲ ಎಂದರು. ಒಬ್ಬಂಟಿಯಾಗಿ ಬಂದರೆ ಒಪ್ಪುತ್ತೇನೆ ಎಂದು ಅವರು ಹೇಳಿದರು" ಎಂದು ಹೇಳಿದ್ದರು. ಮಗುವನ್ನು ಕೊಲ್ಲುವುದನ್ನು ಬಿಟ್ಟು ತನಗೆ ಬೇರೆ ದಾರಿಯಿಲ್ಲ ಎಂದು ಆರೋಪಿ ಹೇಳಿದ್ದಾಳೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕೆ ವಸಂತ್‌ನನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net