ಶ್ವಾನ ಹೆಸರಲ್ಲಿ ವಾಸಸ್ಥಳ ಪ್ರಮಾಣ ಪತ್ರ ಕೊಟ್ಟ ಅಧಿಕಾರಿಗಳು! ಇಲ್ಲಿದೆ ನೋಡಿ ವೈರಲ್​ ಫೋಸ್ಟ್ ​| Dog Babu

Untitled design (83)
Published on

Dog Babu: ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ನಡೆಯುತ್ತಿರುವ ವಿವಾದದ ಮಧ್ಯೆ ಪಟ್ನಾ ಜಿಲ್ಲೆಯಲ್ಲಿ ಶ್ವಾನ(ನಾಯಿ) ಹೆಸರಿಲ್ಲಿ ವಾಸಸ್ಥಳ ಪ್ರಮಾಣ ಪತ್ರ ನೀಡಿದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಮಸೌರ್ಹಿಯಲ್ಲಿರುವ ಸರ್ಕಾರದ ಸಾರ್ವಜನಿಕ ಸೇವೆಗಳ ಹಕ್ಕು(RTPS) ಪೊರ್ಟಲ್​​ ಮೂಲಕ ಈ ಪ್ರಮಾಣ ಪತ್ರ ನೀಡಲಾಗಿದೆ ಎಂದು ವರದಿಯಾಗಿದೆ.

ಪ್ರಮಾಣ ಪತ್ರದಲ್ಲೇನಿದೆ?

ಪ್ರಮಾಣ ಪತ್ರದಲ್ಲಿ ಅರ್ಜಿದಾರರ ಹೆಸರು 'ನಾಯಿ ಬಾಬು'(Dog Babu) ಎಂದು ಹೆಸರಿಸಲಾಗಿದೆ. ಅಲ್ಲದೆ ತಂದೆ 'ಕುಟ್ಟ ಬಾಬು' ಮತ್ತು ತಾಯಿ 'ಕುಟಿಯಾ ದೇವಿ' ಎಂದು ಹೆಸರಿಸಲಾಗಿದೆ. ಇದಕ್ಕಿಂತಲೂ ಕೆಟ್ಟದಾಗಿ, ಪ್ರಮಾಣಪತ್ರದಲ್ಲಿ ಪಾಸ್‌ಪೋರ್ಟ್ ಗಾತ್ರದ ಫೋಟೋವನ್ನು ಹೊಂದಿದೆ ಮತ್ತು ಸ್ಥಳೀಯ ಕಂದಾಯ ಅಧಿಕಾರಿಯ ಡಿಜಿಟಲ್ ಸಹಿಯನ್ನು ಕೂಡ ಹೊಂದಿದೆ. 2025ರ ಬಿಹಾರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಚುನಾವಣಾ ಆಯೋಗವು ನಡೆಸುತ್ತಿರುವ ಮತದಾರರ ಪರಿಶೀಲನಾ ಕಾರ್ಯದ ಸಮಯದಲ್ಲಿ ಈ ನಕಲಿ ದಾಖಲೆ ಪತ್ತೆಯಾಗಿದ್ದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್​ ಆಗಿದೆ.

ತನಿಖೆ ಆರಂಭಿಸಿದ ಜಿಲ್ಲಾಡಳಿತ ಇನ್ನು ಈ ಪ್ರಕರಣ ವೈರಲ್​ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಪಟ್ನಾ ಜಿಲ್ಲಾಡಳಿತ ಡಾಗ್​ ಬಾಬು ಹೆಸರಿನಲ್ಲಿ ನೀಡಲಾದ ಪ್ರಮಾಣ ಪತ್ರವನ್ನು ರದ್ದು ಮಾಡಿದೆ.ಅಲ್ಲದೆ, ಈ ಪ್ರಕರಣದಲ್ಲಿ ಭಾಗಿಯಾಗಿರುವ ಅರ್ಜಿದಾರ, ಕಂಪ್ಯೂಟರ್​ ಆಪರೇಟರ್​ ಮತ್ತು ಅಧಿಕಾರಿಗಳ ವಿರುದ್ಧ ತನಿಖೆ ಆರಂಭಿಸಿದೆ.

ವೈರಲ್​​ ಪೋಸ್ಟ್​​ಗೆ ಫನ್ನಿ ಕಾಮೆಂಟ್​

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ನೆಟ್ಟಿಗರು, "ಇದು ಅತ್ಯಂತ ತಮಾಷೆಯ ನಕಲಿ ಪ್ರಮಾಣಪತ್ರವಾಗಿರಬೇಕು. ಕುಟ್ಟ ಬಾಬು ಮತ್ತು ಕುಟಿಯಾ ದೇವಿಯ ಮಗ ನಾಯಿ ಬಾಬು ಬಿಹಾರದ ನಿವಾಸಿ ಎಂದು ಅಧಿಕೃತವಾಗಿ ಪ್ರಮಾಣೀಕರಿಸಲ್ಪಟ್ಟಿದ್ದಾನೆ. ನಾಯಿಯ ನಿವಾಸ ಪ್ರಮಾಣಪತ್ರವನ್ನು ಮಾಡಲು ಯಾರೋ ನಿಜವಾಗಿಯೂ ಸರ್ಕಾರಿ ಟೆಂಪ್ಲೇಟ್ ಅನ್ನು ಬಳಸಿದ್ದಾರೆ! ಎಂದು ಕಾಮೆಂಟ್​ ಮಾಡಿದ್ದಾರೆ.

ಮತ್ತೊಬ್ಬರು ಇದು ಬಿಹಾರದಲ್ಲಿ ಮಾತ್ರ ಸಂಭವಿಸುತ್ತೆ? ಇದೀಗ ಈ ನಾಯಿ ಬಾಬು ಎಲ್ಲಿ ಇದ್ದಾನೆ? ಎಂದು ತರಹೇವಾರಿ ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net