

ಬೆಂಗಳೂರು: ದಿಗ್ವಿಜಯ 24*7 ನ್ಯೂಸ್ ಚಾನಲ್ನಲ್ಲಿ ಮೇ 1 (ಶನಿವಾರ) ಮತ್ತು ಮೇ 2 (ಭಾನುವಾರ)ರಂದು ನಡೆದ ಲಕ್ ಲಕ್ಷ್ಮೀ ನೇರ ಫೋನ್-ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಿಂಪಲ್ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದ 7 ಮಹಿಳೆಯರು ತಲಾ 2 ಸಾವಿರ ರೂಪಾಯಿ ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.
ವಿಜಯವಾಣಿ ಓದುವ ಹಾಗೂ ದಿಗ್ವಿಜಯ ಚಾನಲ್ ವೀಕ್ಷಿಸುವ ಮಹಿಳೆಯರಿಗೆ ಮನೆಯಲ್ಲಿದ್ದುಕೊಂಡೇ ನಗದು ಗೆಲ್ಲುವ ಅವಕಾಶ ಕಲ್ಪಿಸಿಕೊಡಲಾಗಿದೆ. ಈವರೆಗೆ ಕಾರ್ಯಕ್ರಮಕ್ಕೆ ಸಾವಿರಾರು ಕರೆಗಳು ಬಂದಿದ್ದು, ಪ್ರತಿವಾರ 7 ರಿಂದ 10 ಜನ ನಗದು ಬಹುಮಾನ ಗೆಲ್ಲುತ್ತಿದ್ದಾರೆ. ನೀವೂ ಸಹ ವಿಜಯವಾಣಿ ಪತ್ರಿಕೆ ಓದುಗರಾಗಿದ್ದು, ದಿಗ್ವಿಜಯ ನ್ಯೂಸ್ ಚಾನಲ್ ವೀಕ್ಷಕರಾಗಿದ್ದರೆ ವಾರಾಂತ್ಯದ ಶನಿವಾರ ಹಾಗೂ ಭಾನುವಾರ ಮಧ್ಯಾಹ್ನ 2.27ಕ್ಕೆ ನಡೆಯುವ ನೇರಪ್ರಸಾರ ಕಾರ್ಯಕ್ರಮಕ್ಕೆ ಕರೆ ಮಾಡಿ, ಲಕ್ ಲಕ್ಷ್ಮೀ ಕೇಳುವ ಸರಳ ಪ್ರಶ್ನೆಗೆ ಉತ್ತರಿಸಿ ನಗದು ಬಹುಮಾನ ಗೆದ್ದು ಲಕ್ ಲಕ್ಷ್ಮೀಯರಾಗಬಹುದು.
ಶನಿವಾರ(ಮೇ 1)ದ ವಿಜೇತರು:ಶ್ರುತಿ-ಬೆಂಗಳೂರು, ಮೀನಾ-ದೊಡ್ಡಬಳ್ಳಾಪುರ, ಲಾವಣ್ಯ-ಚಿತ್ರದುರ್ಗ.ಭಾನುವಾರ(ಮೇ 2)ದ ವಿಜೇತರು:ಕವಿತಾ-ಹೊಸಪೇಟೆ, ಗೀತಾ-ಉಡುಪಿ, ಜೀವಿತಾ-ದಾವಣಗೆರೆ, ಸಂಗೀತಾ-ರಾಣೆಬೆನ್ನೂರು.