ಮಲ್ಟಿಪ್ಲೆಕ್ಸ್​ನಲ್ಲಿ 99 ರೂಪಾಯಿಗೇ ಕನ್ನಡ ಸಿನಿಮಾ!; ಎಷ್ಟು ದಿನ ಈ ವಿಶೇಷ ಕೊಡುಗೆ?

Kannada Film
Published on

ಬೆಂಗಳೂರು: ಕನ್ನಡ ಚಿತ್ರಪ್ರೇಮಿಗಳಿಗೆ ಇಲ್ಲೊಂದು ವಿಶೇಷ ಕೊಡುಗೆ ಇದೆ. ಅದೇನೆಂದರೆ ಬರೀ 99 ರೂಪಾಯಿಗೆ ಅದೂ ಮಾಲ್​ನಲ್ಲೇ ಕನ್ನಡ ಸಿನಿಮಾ ವೀಕ್ಷಣೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಅದರಲ್ಲೂ ಇಂದೇ ಈ ಆಫರ್​ ಆರಂಭಗೊಂಡಿದ್ದು, ಸೀಮಿತ ಅವಧಿಯಲ್ಲಿ ಮುಗಿಯಲಿದೆ.

ಇತ್ತೀಚಿನ ವರ್ಷಗಳಲ್ಲಿ ಮಲ್ಟಿಪ್ಲೆಕ್ಸ್​, ಥಿಯೇಟರ್​ಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆ. ಪರಭಾಷಾ ಚಿತ್ರಗಳ ಅಬ್ಬರದ ನಡುವೆ ಕನ್ನಡ ಚಿತ್ರಗಳು ನಲುಗುತ್ತಿವೆ. ಇನ್ನು ಮಲ್ಟಿಪ್ಲೆಕ್ಸ್​ಗೆ ಹೋದರೆ ಟಿಕೆಟ್ ದರ ಕೂಡ ಜಾಸ್ತಿಯೇ. ಈ ಎಲ್ಲ ಕಾರಣಗಳಿಂದಾಗಿ ಮಲ್ಟಿಪ್ಲೆಕ್ಸ್​ಗೆ ಹೋಗುವವರ ಸಂಖ್ಯೆ ಇಳಿಮುಖವಾಗಿದೆ. ಆದರೆ, ಮತ್ತೆ ಕನ್ನಡದ ಪ್ರೇಕ್ಷಕರನ್ನು ಮಲ್ಟಿಪ್ಲೆಕ್ಸ್​ಗಳಿಗೆ ಕರೆತರಲೇಬೇಕು ಎಂದು ಮಾಲೀಕರು ನಿರ್ಧರಿಸಿದಂತಿದೆ. ಹೀಗಾಗಿ ಬಂಪರ್​ ಕೊಡುಗೆ ಮೂಲಕ ತನ್ನತ್ತ ಸೆಳೆಯುವ ಪ್ರಯತ್ನ ಪಿವಿಆರ್​ ಐನಾಕ್ಸ್​ ಮಾಡುತ್ತಿದೆ.

"ಕನ್ನಡ ಸ್ಪೆಷಲ್​ ' ಎಂಬ ವಿಶೇಷ ಆಫರ್​ನಲ್ಲಿ ಮೇ 19ರಿಂದ ಮೇ 25ರವರೆಗೆ ಕನ್ನಡದ ಹಿಟ್​ ಸಿನಿಮಾಗಳು ಮಲ್ಟಿಪ್ಲೆಕ್ಸ್​ಗಳಲ್ಲಿ ಮರುಬಿಡುಗಡೆ ಮಾಡಲಾಗುತ್ತಿದೆ. ಪುನೀತ್​ ರಾಜಕುಮಾರ್​ ಅಭಿನಯದ "ರಾಜಕುಮಾರ' ಮತ್ತು "ಗಂಧದ ಗುಡಿ', ಯಶ್​ ಅಭಿನಯದ "ಕೆಜಿಎಫ್​-1' ಮತ್ತು "ಮಾಸ್ಟರ್​ಪೀಸ್​', ಶಿವರಾಜಕುಮಾರ್​, ಶ್ರೀಮುರಳಿ ಅಭಿನಯದ "ಮಫ್ತಿ', ಹಾಗೂ ರಾಜ್​ ಬಿ. ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ, ರಿಷಬ್​ ಶೆಟ್ಟಿ ಕೂಡ ನಟಿಸಿರುವ "ಗರುಡ ಗಮನ, ವೃಷಭ ವಾಹನ' ಚಿತ್ರಗಳು ಬಿಡುಗಡೆಯಾಗಲಿವೆ. ಈ ಪ್ರದರ್ಶನಗಳಿಗೆ ಕೇವಲ 99 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net