'ಶೋಗನ್​' ಮೂಲಕ ಬೈಕ್​ ರೇಸರ್​ ಆಗ್ತಿದ್ದಾರೆ ಲೂಸ್​ ಮಾದ ಯೋಗಿ...

collage (1)
Published on

‘ದುನಿಯಾ’ ಚಿತ್ರದಲ್ಲಿ ‘ಲೂಸ್​ ಮಾದ’ ಪಾತ್ರದ ಮೂಲಕ ರಾತ್ರೋರಾತ್ರಿ ಬೇಡಿಕೆಯ ನಟರಾದವರು ಯೋಗಿ. ಇಂದು ಅವರ ಹುಟ್ಟುಹಬ್ಬ. ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್​ಗಳ ತರಹ ಯೋಗಿ, ಸಹ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈ ಮಧ್ಯೆ, ಯೋಗಿ ಅಭಿನಯದ ‘ಒಂಬತ್ತನೇ ದಿಕ್ಕು’ ಚಿತ್ರತಂಡವು ಯೋಗಿ ಹಬ್ಬಕ್ಕೆ ಟೀಸರ್​ ಬಿಡುಗಡೆ ಮಾಡಿಕೊಂಡು ಉಡುಗೊರೆ ನೀಡಿದೆ. ಅದೇ ರೀತಿ ಒಂದಷ್ಟು ಹೊಸ ಸಿನಿಮಾಗಳೂ ಘೋಷಣೆ ಆಗಿವೆ.

ಆ ಪೈಕಿ ನೀನಾಸಂ ಮಂಜು ನಿರ್ದೇಶನದಲ್ಲಿ ಸಿದ್ಧವಾಗಲಿರುವ ‘ಶೋಗನ್​‘ ಸಿನಿಮಾ ಸಹ ಒಂದು. ಯೋಗಿ ಜನ್ಮದಿನದ ಪ್ರಯುಕ್ತ ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ವಿಭಿನ್ನ ರೀತಿಯ ಫಸ್ಟ್​ಲುಕ್​ ಗಮನಸೆಳೆಯುತ್ತಿದೆ.

ಈ ಚಿತ್ರದಲ್ಲಿ ಬೈಕ್​ ರೇಸರ್​ ಆಗಿ ಯೋಗಿ ಕಾಣಿಸಿಕೊಳ್ಳಲಿದ್ದಾರೆ. ಬಹುತೇಕ ಎಲ್ಲ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಯೋಗಿ, ಬೈಕರ್​ ಆಗಿ ಈವರೆಗೂ ಕಾಣಿಸಿಕೊಂಡಿಲ್ಲ. ಇದೀಗ ಶೋಗನ್​ ಸಿನಿಮಾದಲ್ಲಿ ಆ ಚಾಲೆಂಜ್​ ಸ್ವೀಕರಿಸಿದ್ದಾರೆ.

ರವಿಕಿರಣ್​ ಕಥೆ ಬರೆದಿರುವ ಈ ಚಿತ್ರಕ್ಕೆ ಕೆ.ಎಂ ಪ್ರಕಾಶ್​ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಮ್ಯಾಥ್ಯುಸ್​ ಮನು ಸಂಗೀತ ನೀಡಲಿದ್ದಾರೆ. ಸದ್ಯಕ್ಕೆ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಿನಿಮಾ ಕೆಲಸಗಳು ಸ್ಥಗಿತಗೊಂಡಿದ್ದರಿಂದ, ಚಿತ್ರೀಕರಣಕ್ಕೆ ಚಾಲನೆ ನೀಡಿಲ್ಲ. ಎಲ್ಲ ಅಂದುಕೊಂಡಂತೆ ಆದರೆ, ಪಾತ್ರವರ್ಗದ ಆಯ್ಕೆ ಮಾಡಿಕೊಂಡು, ಆಗಸ್ಟ್ ಅಥವಾ ಸೆಪ್ಟಂಬರ್ ವೇಳೆಗೆ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net