

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಖ್ಯಾತ ಲೇಖಕ ಹಾಗೂ ಸಾಮಾಜಿಕ ಚಿಂತಕರಾದ ಯೋಗೇಶ ಮಾಸ್ಟರ್ ಅವರು ರಚಿಸಿರುವ ``ನನ್ನ ಅರಿವಿನ ಪ್ರವಾದಿ`` ಕೃತಿ ಬಿಡುಗಡೆ ಹಾಗೂ `ಸಮಾನತೆಯ ಸಮಾಜದ ಶಿಲ್ಪಿ ಪ್ರವಾದಿ ಮಹಮ್ಮದ್` (ಸ) ವಿಚಾರ ಸಂಕಿರಣದ ಸರಣಿ ಕಾರ್ಯಕ್ರಮವನ್ನು ಅ.೮ ರಂದು ಬೆಳಗ್ಗೆ ೧೧ ಗಂಟೆಗೆ ನಗರದ ಸಂಘತ್ರಾಸವಾಡಿ ಬಸ್ ನಿಲ್ದಾಣ ಬಳಿಯ ಹಿದಾಯತ್ ಸೆಂಟರ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆ ಸದಸ್ಯ ಅಬ್ದುಲ್ ಖಾದರ್ ತಿಳಿಸಿದರು.
ಪ್ರವಾದಿ ಮಹ್ಮದರ ಜೀವನ ಸಂದೇಶಗಳನ್ನು ಜನರಿಗೆ ತಿಳಿಸುವ ಉz್ದೆÃಶದಿಂದ ನಡೆಸಿಕೊಂಡು ಬರುತ್ತಿರುವ ಅಭಿಯಾನ ಮತ್ತು ಸರಣಿ ಉಪನ್ಯಾಸ ಮಾಲೆ ಭಾಗವಾಗಿ ವಿಚಾರ ಸಂಕಿರಣ ಜರುಗಲಿದೆ ಎಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶರಣಬಸವೇಶ್ವರ ವಿಶ್ವವಿದ್ಯಾಲಯದ ಸಮಕುಲಪತಿ ಪ್ರೊ.ವಿ.ಡಿ.ಮೈತ್ರಿ ಅವರು ಸಮಾರಂಭವನ್ನು ಉದ್ಘಾಟಿಸಿ ಕೃತಿ ಬಿಡುಗಡೆ ಮಾಡುವರು. ನ್ಯಾಯವಾದಿ ಅಶ್ವಿನಿ ಮದನಕರ್ ಅತಿಥಿಗಳಾಗಿರುವರು. ಅಧ್ಯಕ್ಷತೆಯನ್ನು ವಿದ್ವಾಂಸ ಮುಹಮ್ಮದ್ ಕುಂಞ ವಹಿಸುವರು. ಲೇಖಕ ಯೋಗೇಶ ಮಾಸ್ಟರ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಎಂದು ವಿವರಿಸಿದರು.
ಕಾರ್ಯಕ್ರಮ ಸ್ಥಳದಲ್ಲಿ ರಕ್ತದಾನ ಶಿಬಿರ ಸಹ ಆಯೋಜಿಸಲಾಗಿದೆ. ಮನುಕುಲಕ್ಕೆ ಪ್ರವಾದಿ ಮಹಮ್ಮದರ ಮಾನವೀಯ ಕೊಡುಗೆಗಳು ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದ್ದು, ವಿಜೇತರಿಗೆ ನಗದು ಬಹುಮಾನ ವಿತರಿಸಲಾಗುವುದು ಎಂದು ಅಬ್ದುಲ್ ಖಾದರ್ ತಿಳಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ಕೋರಿದರು. ಸುದ್ದಿಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕಲಬುರಗಿಯ ಸ್ಥಾನಿಯ ಅಧ್ಯP್ಷÀ ಝಾಕೀರ್ ಹುಸೇನ್, ಪ್ರಮುಖ ಮದರ್‌ವುದ್ದೀನ್ ಇತತರಿದ್ದರು.