

ಎಲ್ಲಾ ದೋಷಗಳಲ್ಲಿ ವಾಯು ದೋಷವನ್ನು ಅತ್ಯಂತ ಹಾನಿಕಾರಕವೆಂದು ಪರಿಗಣಿಸಲಾಗುತ್ತದೆ. ವಾಯು ಮುದ್ರೆಯನ್ನು ಸಾವಿರಾರು ವರ್ಷಗಳಿಂದ ಬಳಸಲಾಗುತ್ತದೆ. ದೇಹದಲ್ಲಿನ ಗಾಳಿಯ ಅಂಶವನ್ನು ನಿಯಂತ್ರಿಸುವ ಮೂಲಕ ದೇಹದ ಜಠರ ಕರುಳಿನ ಕಾರ್ಯವನ್ನು ಸುಧಾರಿಸುತ್ತದೆ. ಇದರೊಂದಿಗೆ ಮುದ್ರಾ ವಾಯುವು ದೇಹದಿಂದ ಪರಿಣಾಮಕಾರಿಯಾಗಿ ಬಿಡುಗಡೆಯಾಗುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸರಾಗಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಪದ್ಮಾಸನ, ಸಿದ್ಧಾಸನ, ಅಥವಾ ವಜ್ರಾಸನದಂತಹ ಕುಳಿತಿರುವ ಆಸನಗಳಲ್ಲಿ ಇದನ್ನು ಮಾಡಬಹುದು. ಕುರ್ಚಿಯಲ್ಲಿ ಕುಳಿತಾಗ ಮತ್ತು ನಿಂತಿರುವಾಗ ಅಥವಾ ಮಲಗಿರುವಾಗಲೂ ಇದನ್ನು ಮಾಡಬಹುದು. ವಾಯು ಮುದ್ರೆಯು ಅತ್ಯುತ್ತಮ ಕೈ ಯೋಗ ಮುದ್ರೆಯಾಗಿದ್ದು ಅದು ನಿಮ್ಮ ದೇಹದಲ್ಲಿನ ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತದೆ.
ತೋರು ಬೆರಳಿನ ತುದಿಯನ್ನು ಹೆಬ್ಬೆರಳಿನ ಬುಡದಲ್ಲಿ ತಾಗಿಸಬೇಕು. ಹೆಬ್ಬೆರಳನ್ನು ತೋರು ಬೆರಳಿನ ಬೆನ್ನಿನ ಮೇಲೆ ಇಡಬೇಕು. ಉಳಿದ ಮೂರು ಬೆರಳುಗಳು ನೇರವಾಗಿರಲಿ. ಇದರಲ್ಲಿ ತೋರು ಬೆರಳು ವಾಯುತತ್ವವನ್ನು ಹೊಂದಿದೆ. ವಾಯು ತತ್ವ ಹೆಚ್ಚಾದಾಗ ಬೇರೆ ಬೇರೆ ವ್ಯಾಧಿಗಳು ಉಂಟಾಗುತ್ತವೆ. ಹೆಚ್ಚಿನ ವಾಯು ದೋಷ, ಬೆನ್ನುನೋವು, ಸೊಂಟ ನೋವು ಸಾಯಟಿಕ ಸಂಧಿವಾತ ಇತ್ಯಾದಿಗಳು. ಮುದ್ರೆಯನ್ನು ಎರಡೂ ಕೈಯಲ್ಲಿ ಅಭ್ಯಾಸ ಮಾಡಬೇಕು.
ಈ ವಾಯುಮುದ್ರೆಯನ್ನು ಗಾಳಿ ಮುದ್ರೆ ಎಂದು ಹೇಳುತ್ತಾರೆ. ದೇಹದಲ್ಲಿ ಇರುವ ವಾಯುವನ್ನು ಕಡಿಮೆಗೊಳಿಸಿ ಸಮತೋಲನ ಸ್ಥಿತಿಗೆ ತರುವುದೇ ಈ ಮುದ್ರೆಯ ಮುಖ್ಯ ಉದ್ದೇಶವಾಗಿದೆ. ಈ ಮುದ್ರೆಯನ್ನು ಮಾಡುವುದರಿಂದ ಆಥ್ರರೈಸ್, ರ್ಪಾನ್ಸನ್ ರೋಗ, ಗೌಟ್, ಸರ್ವಿಕಲ್ ಸ್ಪಾಂಡಿಲ್ಣಾಟಿಸ್, ಗ್ಯಾಸ್ಟಿಕ್ ಸಮಸ್ಯೆ ಮತ್ತು ರಕ್ತ ಪರಿಚಲನೆಯ ತೊಂದರೆಗಳು ನಿಯಂತ್ರಣವಾಗುತ್ತವೆ. ಹೊಟ್ಟೆ ಉಬ್ಬರಿಸುವಿಕೆ, ಸೊಂಟ ನೋವು, ಬೆನ್ನು ನೋವು, ವಾತ ಮುಂತಾದ ವಾಯು ಪ್ರಕೋಪದ ತೊಂದರೆಗಳು ಉಂಟಾದಾಗ ವಾಯು ಮುದ್ರೆಯನ್ನು ಸುಮಾರು 20 ನಿಮಿಷದಿಂದ 40 ನಿಮಿಷ ಮಾಡಿದಾಗ ಆರಾಮವಾಗುತ್ತದೆ.
ಅನಂತರ ಪ್ರಾಣ ಮುದ್ರೆಯನ್ನು 10 ರಿಂದ 20 ನಿಮಿಷ ಮಾಡುವುದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು. ಕುತ್ತಿಗೆ ನೋವು ಭುಜಗಳ ಸೆಳೆತವನ್ನು ನಿವಾರಿಸಲು ಸಹಕಾರಿಯಾಗಿದೆ. ಮಂಡಿ ನೋವಿನ ನಿಯಂತ್ರಣಕ್ಕೆ ವಾಯುಮುದ್ರೆ ಸಹಕಾರಿಯಾಗುತ್ತದೆ. ಈ ಮೇಲೆ ತಿಳಿಸಿದ ತೊಂದರೆ ನಿವಾರಣೆ ಆಗುವವರೆಗೆ ವಾಯು ಮುದ್ರೆಯನ್ನು ಅಭ್ಯಾಸ ಮಾಡಿದರೆ ಸಾಕು ನಂತರ ಅಭ್ಯಾಸ ಮಾಡುವುದು ಬೇಡ. ಶರೀರದಲ್ಲಿರುವ ವಾಯುವಿನ ಏರುಪೇರುಗಳ ಸಮಸ್ಯೆಯನ್ನು ನಿವಾರಿಸುತ್ತದೆ. ಎಲ್ಲಾ ಬಗೆಯ ವಾಯುದೋಷಗಳ ನಿಯಂತ್ರಣಕ್ಕೆ ಈ ಮುದ್ರೆ ಸಹಕಾರಿಯಾಗುತ್ತದೆ. ಊಟಮಾಡಿ ಹೊಟ್ಟೆ ಉಬ್ಬರಿಸಿದರೆ ಕೂಡಲೇ ವಜ್ರಾಸನದಲ್ಲಿ ವಾಯು ಮುದ್ರೆಯನ್ನು ಹಾಕಿ ಸ್ವಲ್ಪ ಹೊತ್ತು ಅಭ್ಯಾಸ ಮಾಡಿದರೆ ಆರಾಮವಾಗುತ್ತದೆ. ಕೊನೆಯ ಪಕ್ಷ ದಿನಾಲು 10 ರಿಂದ 15 ನಿಮಿಷ ವಾಯು ಮುದ್ರೆಯನ್ನು ಮಾಡಿದರೆ ದೇಹದಲ್ಲಿರುವ ವಾಯುವನ್ನು ಸಮತೋಲನದಲ್ಲಿರಿಸಬಹುದು.