'ಯಶ್' ತಾಯಿ ನಿರ್ಮಾಣದ 'ಕೊತ್ತಲವಾಡಿ' ಸಿನಿಮಾ ಟ್ರೈಲರ್​ ಬಿಡುಗಡೆ; ಹೆಚ್ಚಿದ ನಿರೀಕ್ಷೆ| Kothalavadi Trailer

Untitled design (1)
Published on

Kothalavadi Trailer; ನಟ ರಾಕಿಂಗ್​ ಸ್ಟಾರ್​ ಯಶ್ ಅವರ ತಾಯಿ ಪುಷ್ಪ ಅವರು ನಿರ್ಮಾಣ ಮಾಡಿರುವ ‘ಕೊತ್ತಲವಾಡಿ’ ಸಿನಿಮಾದ ಟ್ರೈಲರ್​ ಇಂದು (23) ಬಿಡುಗಡೆ ಕಂಡಿದೆ. ಹಳ್ಳಿಯ ಕತೆಯನ್ನು ಒಳಗೊಂಡ ಸಿನಿಮಾ ಇದಾಗಿದ್ದು, ಇದೀಗ ಬಿಡುಗಡೆ ಆಗಿರುವ 2:24 ನಿಮಿಷದ ಟ್ರೈಲರ್​ನಿಂದ ಅಭಿಮಾನಿಗಳಲ್ಲಿ ಸಿನಿಮಾದ ಭರವಸೆ ಮತ್ತಷ್ಟು ಹೆಚ್ಚಾಗಿದೆ.

ಈ ಹಿಂದೆ ರಿಲೀಸ್ ಆಗಿದ್ದ ಟೀಸರ್‌ನಲ್ಲಿ ಮೇಕಿಂಗ್ ಬಹಳ ಗಮನಸೆಳೆದಿತ್ತು. ಇದೀಗ ಟ್ರೇಲರ್ ಮೂಲಕ ಕಥೆಯ ಒಳನೋಟವನ್ನು ಒಂದು ಊರಿನ ಸ್ಥಳೀಯ ರಾಜಕೀಯವೇ ಈ ಸಿನಿಮಾದ ಕೇಂದ್ರಬಿಂದು ಎಂಬ ಸುಳಿವು ಟ್ರೇಲರ್‌ನಲ್ಲಿ ಸಿಗುತ್ತದೆ. ಈ ಸಿನಿಮಾದ ಸಹ ಅದ್ಭುತವಾಗಿದ್ದು, ಮೇಕಿಂಗ್‌ ಕೂಡ ಗುಣಮಟ್ಟದಿಂದ ಕೂಡಿದೆ.

(ಏಜೆನ್ಸೀಸ್)

‘ಕೊತ್ತಲವಾಡಿ’ ಸಿನಿಮಾವನ್ನು ಯಶ್ ಅವರ ತಾಯಿ ಪುಷ್ಪ ಅವರು ನಿರ್ಮಾಣ ಮಾಡುತ್ತಿದ್ದಾರೆ. ಶ್ರೀರಾಜ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಾಯಕಿಯಾಗಿ ಕಾವ್ಯಾ ಶೈವ ನಟಿಸಿದ್ದು, ಅವಿನಾಶ್, ಮಾನಸಿ ಸುಧೀರ್, ರಘು ರಾಮನಕೊಪ್ಪ ಇನ್ನಿತರೆ ಪ್ರತಿಭಾವಂತ ಕಲಾವಿದರು ಬಣ್ಣಹಚ್ಚಿದ್ದಾರೆ. ವಿಕಾಸ್ ವಸಿಷ್ಠ ಸಿನಿಮಾಕ್ಕೆ ಸಂಗೀತ ನೀಡಿದ್ದು, ಕೆಆರ್​ಜಿ ಸ್ಟುಡಿಯೋಸ್ ಸಿನಿಮಾ ವಿತರಣೆ ಮಾಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net