ಹೆಗಲ ಮೇಲೆ 'ಕಲಶ ಕನ್ವರ್' ಹೊತ್ತುಕೊಂಡು 225 ಕಿ.ಮೀ ದೂರ ನಡೆದ 4 ವರ್ಷದ ಬಾಲಕ; ವಿಡಿಯೋ ವೈರಲ್| Viral video

viral vedio
Published on

Viral video; ಶ್ರಾವಣ ಮಾಸದಲ್ಲಿ ನಡೆಯುವ ಶಿವನಿಗೆ ಅರ್ಪಿತವಾದ ಕನ್ವರ್ ಯಾತ್ರೆಯ ಹೃದಯಸ್ಪರ್ಶಿ ವಿಡಿಯೋವೊಂದು ಹೊರಬಿದ್ದಿದೆ. ಕನ್ವರ್ ಯಾತ್ರೆಯ ಹಿನ್ನೆಲೆ 4 ವರ್ಷದ ಬಾಲಕನೊಬ್ಬ ಗಂಗಾ ಜಲ ತುಂಬಿದ್ದ ಕಲಶ ಕನ್ವರ್ ಅನ್ನು ಹೊತ್ತುಕೊಂಡು ಹರಿದ್ವಾರದಿಂದ 225 ಕಿ.ಮೀ ದೂರ ನಡೆದುಕೊಂಡು ಹೋಗಿದ್ದಾನೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಅನೇಕ ಬಳಕೆದಾರರು ಆ ಬಾಲಕ ಭಕ್ತಿಯನ್ನು ಶ್ಲಾಘಿಸಿದ್ದಾರೆ. ಇನ್ನೂ ಕೆಲವರು ಆತನ ಪಾದಗಳ ಮೇಲೆ ಆಗಿರುವ ಗಾಯವನ್ನು ನೋಡಿ ಮರುಗಿದ್ದಾರೆ.

(ಏಜೆನ್ಸೀಸ್)

ಈ ವಿಡಿಯೋ 2 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು, 5,000 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಪಡೆದಿದ್ದು, ಒಂದು ಮಿಲಿಯನ್ ವೀಕ್ಷಣೆಗಳನ್ನು ದಾಟಿದೆ.

ಈ ವಿಡಿಯೋದಲ್ಲಿ ಬಾಲಕ ಕಲಶ ಕನ್ವರ್ ಅನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು. ಗಂಗಾ ನದಿಯ ಪವಿತ್ರ ನೀರು ತುಂಬಿದ ಎರಡು ಸಣ್ಣ ಕಲಶಗಳನ್ನು ಅವನ ಹೆಗಲ ಮೇಲೆ ಇರುವ ದಪ್ಪ ಕೋಲಿನ ಎರಡೂ ತುದಿಗಳಿಗೆ ಇರಿಸಲಾಗಿದೆ. ಮತ್ತು ದೂರದ ಪ್ರಯಾಣದ ಕಾರಣದಿಂದಾಗಿ ಅವನ ಪಾದಗಳು ಗಾಯಗೊಂಡಿರುವುದನ್ನು ಕಾಣಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net