

ಮುಂಬೈ: ಕೆಜಿಎಫ್ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡರು ಯಶ್. ಕೆಜಿಎಫ್ 1 ಮತ್ತು ಕೆಜಿಎಫ್ ಚಾಪ್ಟರ್ 2 ಈ ಎರಡೂ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಕಲೆಕ್ಷನ್ ಮಾಡಿದ್ದವು. ಈ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾದಲ್ಲಿ ಯಶ್ ರಾಕಿ ಭಾಯ್ ಪಾತ್ರವನ್ನು ನಿರ್ವಹಿಸಿದ್ದರು. ಅಂದಿನಿಂದ ಅಭಿಮಾನಿಗಳಿಗೆ ಯಶ್ ಪ್ರೀತಿಯ ‘ರಾಕಿ ಭಾಯ್’ ಆಗಿದ್ದಾರೆ. (KGF 3)
ಕೆಜಿಎಫ್ ಫ್ರಾಂಚೈಸಿನಿಂದ ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕೆಜಿಎಫ್ 3 ಚಿತ್ರವು ಖಂಡಿತವಾಗಿ ಬರಲಿದೆ ಎಂದು ಯಶ್ ಇತ್ತೀಚಿನ ಸಂದರ್ಶವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜತೆ ಚರ್ಚಿಸುತ್ತಿರುವುದಾಗಿ ತಿಳಿಸಿದ್ದಾರೆ. ನಾವು ಅದರ ಬಗ್ಗೆ ಮಾತನಾಡುತ್ತೇವೆ, ನಮಗೆ ಒಂದು ಬಹಳ ದೊಡ್ಡ ಆಲೋಚನೆ ಇದೆ ಎಂದು ಹೇಳಿದರು. ಈ ಸಿನಿಮಾದ ಬಗ್ಗೆ ಸಂಪೂರ್ಣ ಗಮನವನ್ನು ನೀಡುವ ಅವಶ್ಯಕತೆಯಿದೆ. ನಾವು ಯಾವುದಕ್ಕೂ ಹಣವನ್ನು ಖರ್ಚು ಮಾಡಲು ಬಯಸುವುದಿಲ್ಲ. ಪ್ರೇಕ್ಷಕರು ನಮ್ಮ ಬಗ್ಗೆ ಹೆಮ್ಮೆ ಪಡುವಂತೆ ಮಾಡಲು ನಾವು ಬಯಸುತ್ತೇವೆ. ಈ ಬಾರಿ ನಾವು ದೊಡ್ಡದನ್ನು ತರುತ್ತೇವೆ ಎಂದ ಹೇಳಿದ್ದಾರೆ.
ಇನ್ನು ಇದೇ ಸಮಯದಲ್ಲಿ ಟಾಕ್ಸಿಕ್ ಸಿನಿಮಾದ ಬಗ್ಗೆಯೂ ಯಶ್ ಮಾತನಾಡಿದ್ದಾರೆ. ನಾವು ಸ್ವಲ್ಪ ಮುಂಚಿತವಾಗಿ ಸಿನಿಮಾ ಶೂಟ್ ಪ್ರಾರಂಭಿಸಬೇಕಾಗಿತ್ತು. ಆದರೆ ಅಂದುಕೊಂಡಂತೆ ನಡೆಯಲಿಲ್ಲ. ಡೇಟ್ ಪ್ರಾಬ್ಲಂ ಆಯಿತು. ಇದು ನಿರೀಕ್ಷೆಗಿಂತ ಹೆಚ್ಚಿನ ಸಮಯವನ್ನು ತೆಗೆದುಕೊಂಡಿತು. ಅಂದುಕೊಂಡ ದಿನಾಂಕದಂದು ಸಿನಿಮಾ ರಿಲೀಸ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಈ ಹಿಂದೆ ಚಿತ್ರತಂಡವು ಟಾಕ್ಸಿಕ್ ಸಿನಿಮಾವನ್ನು 2025ರ ಏಪ್ರಿಲ್ನಲ್ಲಿ ಬಿಡುಗಡೆ ಮಾಡೋದಾಗಿ ಹೇಳಿಕೊಂಡಿದ್ದರು. ಈ ಚಿತ್ರದ ಕುರಿತು ಸಾಕಷ್ಟು ನಿರೀಕ್ಷೆಗಳನ್ನು ಫ್ಯಾನ್ಸ್ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಅಂದುಕೊಂಡ ಸಮಯಕ್ಕೆ ಬರುವುದಿಲ್ಲ ಎಂಬುದನ್ನು ನಟ ಯಶ್ ಕನ್ಫರ್ಮ್ ಮಾಡಿದ್ದಾರೆ.(ಏಜೆನ್ಸೀಸ್)