

ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ಗೆ ಕೊಲೆ ಮಾಡುವುದಾಗಿ ಬೆದರಿಕೆ(Salman Khan Death Threat) ಬಂದಿರುವುದು ಗೊತ್ತೆ ಇದೆ. ಸದ್ಯ ಈ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಕಂಡುಬಂದಿದೆ. ಬೆದರಿಕೆ ಹಾಕಿದ ವ್ಯಕ್ತಿಯೆ ಕ್ಷಮೆಯಾಚಿಸಿರುವುದಾಗಿ ಮಾಹಿತಿ ಸಿಕ್ಕಿದೆ.
ಅಸಲಿಗೆ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆಯನ್ನು ಮುಂಬೈ ಟ್ರಾಫಿಕ್ ಪೊಲೀಸರ ವಾಟ್ಸ್ಆ್ಯಪ್ಸಂಖ್ಯೆಗೆ ಕಳುಹಿಸಲಾಗಿತ್ತು. ಈಗ ಮುಂಬೈ ಟ್ರಾಫಿಕ್ ಪೊಲೀಸರಿಗೆ ಅದೇ ವಾಟ್ಸ್ಆ್ಯಪ್ ಸಂಖ್ಯೆಯಿಂದ ಮತ್ತೊಂದು ಸಂದೇಶ ಬಂದಿದೆ. ಅದರಲ್ಲಿ ಬೆದರಿಕೆ ಹಾಕಿದ ವ್ಯಕ್ತಿಯೇ ಕ್ಷಮೆಯಾಚಿಸಿದ್ದಾನೆ. ಮೆಸೇಜ್ ಕಳುಹಿಸಿರುವ ವ್ಯಕ್ತಿ, ನಾನು ಈ ಸಂದೇಶವನ್ನು ತಪ್ಪಾಗಿ ಕಳುಹಿಸಿದ್ದೇನೆ ಮತ್ತು ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾನೆ ಎನ್ನಲಾಗಿದೆ.
ಜಾರ್ಖಂಡ್‌ನಲ್ಲಿ ಈ ಮೆಸೇಜ್ ಕಳುಹಿಸಿದ ವ್ಯಕ್ತಿ ಇರುವ ಸ್ಥಳವನ್ನು ಪೊಲೀಸರು ಪತ್ತೆ ಮಾಡಿದ್ದು ಸದ್ಯ ಆತನ ಹುಡುಕಾಟದಲ್ಲಿ ಪೊಲೀಸ್ ತಂಡ ಅಲ್ಲಿಗೆ ಹೋಗಿದೆ. ಈ ಮೊದಲು ಮಾಡಿದ ಮೆಸೇಜ್ನಲ್ಲಿ ಸಲ್ಮಾನ್ ಖಾನ್ ಮತ್ತು ಲಾರೆನ್ಸ್ ಗ್ಯಾಂಗ್ ನಡುವೆ ರಾಜಿ ಮಾಡುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ಅದಕ್ಕಾಗಿ ನೀವು 5 ಕೋಟಿ ರೂಪಾಯಿ ನೀಡಬೇಕು. ಹಣ ನೀಡದಿದ್ದರೆ ಸಲ್ಮಾನ್ ಖಾನ್ ಸ್ಥಿತಿ ಬಾಬಾ ಸಿದ್ದಿಕಿಗಿಂತ ಹೀನಾಯವಾಗಲಿದೆ ಎಂದು ಎಚ್ಚರಿಸಿದ್ದ.
ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ತಂದೆ ಸಲೀಂ ಖಾನ್ ಅವರು ಇತ್ತೀಚೆಗೆ ತಮ್ಮ ಮಗ ನಿರಪರಾಧಿ ಎಂದು ಹೇಳಿದ್ದರು. ಸಲ್ಮಾನ್ ಕ್ಷಮೆ ಕೇಳುವುದಿಲ್ಲ, ಏಕೆಂದರೆ ಕ್ಷಮೆಯಾಚಿಸಿದರೆ ಅವನು ತಪ್ಪು ಮಾಡಿದ್ದಾನೆ ಎಂದು ಅರ್ಥವಾಗುತ್ತದೆ. ಸಲ್ಮಾನ್ ಯಾವುದೇ ಪ್ರಾಣಿಯನ್ನು ಕೊಲ್ಲಲಿಲ್ಲ. ಈ ವಿಷಯಗಳಲ್ಲಿ ನಮಗೆ ನಂಬಿಕೆ ಇಲ್ಲ. ಅವರು ಯಾವುದೇ ಅಪರಾಧ ಮಾಡಿಲ್ಲ ಎಂದು ಹೇಳಿದ್ದರು.
ಈ ಬೆದರಿಕೆಗಳ ನಡುವೆ ಸಲ್ಮಾನ್ ಖಾನ್ ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ.ಇತ್ತೀಚೆಗೆ ಅವರು ಬಿಗ್ ಬಾಸ್‌ನ ವಾರಾಂತ್ಯದ ಸಂಚಿಕೆಯನ್ನು ಚಿತ್ರೀಕರಿಸಿದರು. ಬೆದರಿಕೆ ಮತ್ತು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆಯ ನಂತರ ಪೊಲೀಸರು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಭದ್ರತೆಯನ್ನು ಹೆಚ್ಚಿಸಿದ್ದಾರೆ .(ಏಜೆನ್ಸೀಸ್)