ಅಭಿಮಾನಿ ಕಾಲಿನ ಮೇಲೆ ಹರಿದ ನಟ ಯಶ್​ ಬೆಂಗಾವಲು ಕಾರು!

Untitled design - 2024-02-29T143430.675
Published on

ಬಳ್ಳಾರಿ: ಇಂದು ಬಳ್ಳಾರಿಯ ಅಮೃತೇಶ್ವರ ಸ್ಪಟಿಕ ಲಿಂಗ ದೇಗುಲ ಉದ್ಘಾಟನೆಗೆ ಆಗಮಿಸಿದ್ದ ನಟ ಯಶ್ ಅವರ ಕಾರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ಯಶ್​ ಅಭಿಮಾನಿಯ ಕಾಲಿನ ಮೇಲೆ ಅವರ ಬೆಂಗಾವಲು ಕಾರು ಹರಿದಿದೆ. ಘಟನೆ ಬಳ್ಳಾರಿಯ ನಗರದ ವಲಯದಲ್ಲಿ ವರದಿಯಾಗಿದೆ.

ಯಶ್ ನೋಡಲು ಬಂದ ಅಭಿಮಾನಿಯ ಕಾಲ ಮೇಲೆ ಬೆಂಗಾವಲು ಕಾರು ಹರಿದ ಪರಿಣಾಮ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಅಪಘಾತ ಬಳ್ಳಾರಿಯ ಹೊರವಲಯದಲ್ಲಿ ಇರುವ ಬಾಲಾಜಿ ಕ್ಯಾಂಪ್​ ಬಳಿ ಸಂಭವಿಸಿದೆ. ನಟ ಯಶ್ ಬಾಲಾಜಿ ನಗರದಲ್ಲಿ ನೂತನವಾಗಿ ನಿರ್ಮಾಣವಾದ ಅಮೃತೇಶ್ವರ ಸ್ಪಟಿಕ ಲಿಂಗ ದೇವಸ್ಥಾನ ಉದ್ಘಾಟನೆಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದ ವಸಂತ ಎಂಬ ಯುವಕನ ಮೇಲೆ ಯಶ್ ಬೆಂಗಾವಲು ಕಾರು ಹರಿದಿದೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿದೆ. ಕಾರಿ ಹಿಂಬಾಲಿಸಿಕೊಂಡು ಓಡಿ ಬಂದ ಅಭಿಮಾನಿಗಳ ನಡುವೆ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net