More

    ಹಿಮಾಚಲ ಪ್ರದೇಶದಲ್ಲಿ ಅಡ್ಡ ಮತದಾನ: 6 ಬಂಡಾಯ ಕಾಂಗ್ರೆಸ್ ಶಾಸಕರ ಸದಸ್ಯತ್ವ ರದ್ದು, ಆದೇಶ ಹೊರಡಿಸಿದ ಸ್ಪೀಕರ್

    ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದಲ್ಲಿ ರಾಜ್ಯಸಭಾ ಚುನಾವಣೆ ವೇಳೆ ಅಡ್ಡ ಮತದಾನ ಮಾಡಿದ ಆರು ಬಂಡಾಯ ಕಾಂಗ್ರೆಸ್ ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ಹಣಕಾಸು ಮಸೂದೆಗೆ ಸರ್ಕಾರದ ಪರವಾಗಿ ಮತ ಹಾಕದೆ ಪಕ್ಷದ ವಿಪ್ ಉಲ್ಲಂಘಿಸಿದ ಆರು ಕಾಂಗ್ರೆಸ್ ಶಾಸಕರನ್ನು ವಿಧಾನಸಭಾ ಸ್ಪೀಕರ್ ಅನರ್ಹಗೊಳಿಸಿದರು.

    ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ, ಬಂಡಾಯ ಶಾಸಕರು ವಿಪ್ ಉಲ್ಲಂಘಿಸಿರುವುದು ಕಂಡುಬಂದಿದೆ. ಹೀಗಾಗಿ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸಲಾಗಿದೆ. ಕಾಂಗ್ರೆಸ್ ಚಿಹ್ನೆಯ ಮೇಲೆ ಚುನಾವಣೆಗೆ ಸ್ಪರ್ಧಿಸಿದ್ದ ಆರು ಶಾಸಕರು ಪಕ್ಷಾಂತರ ನಿಷೇಧ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಕುಲದೀಪ್ ಸಿಂಗ್ ಪಠಾನಿಯಾ ಹೇಳಿದ್ದಾರೆ. ಆದ್ದರಿಂದ ಈ ಶಾಸಕರ ಸದಸ್ಯತ್ವವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ.

    30 ಪುಟಗಳ ಆದೇಶ ನೀಡಿದ ಸ್ಪೀಕರ್
    ನನ್ನ 30 ಪುಟಗಳ ಆದೇಶದಲ್ಲಿ ನಾನು ಈ ಮಾಹಿತಿಯನ್ನು ಬಹಳ ವಿವರವಾಗಿ ನೀಡಿದ್ದೇನೆ. ಆ 6 ಶಾಸಕರನ್ನು ಅನರ್ಹಗೊಳಿಸಿದ್ದೇನೆ, ಅವರು ಇನ್ನು ಮುಂದೆ ಹಿಮಾಚಲ ಪ್ರದೇಶ ವಿಧಾನಸಭೆಯ ಸದಸ್ಯರಲ್ಲ ಎಂದರು.

    ಪಕ್ಷದ ವಿಪ್ ಉಲ್ಲಂಘಿಸಿದ ಆರು ಕಾಂಗ್ರೆಸ್ ಶಾಸಕರು ಶೋಕಾಸ್ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ ಬುಧವಾರ ತಮ್ಮ ವಕೀಲರೊಂದಿಗೆ ವಿಧಾನಸಭೆಗೆ ಹಾಜರಾಗಿದ್ದರು. ಎಲ್ಲಾ ದಾಖಲೆಗಳನ್ನು ಸಮರ್ಪಕವಾಗಿ ಒದಗಿಸಿಲ್ಲ ಎಂದು ವಕೀಲರು ವಾದಿಸಿದರು. ಸ್ಪೀಕರ್ ಮುಂದೆ ಆರು ಕಾಂಗ್ರೆಸ್ ಶಾಸಕರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಸತ್ಯಪಾಲ್ ಜೈನ್, ತಮ್ಮ ಕಕ್ಷಿದಾರರಿಗೆ ಕೇವಲ ನೋಟಿಸ್ ನೀಡಲಾಗಿದೆ. ಮಂಗಳವಾರ ಸಂಜೆ ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಮಾತ್ರ ನೀಡಲಾಗಿದ್ದು, ಇತರ ಲಗತ್ತುಗಳನ್ನು ಒದಗಿಸಿಲ್ಲ ಎಂದು ವಾದಿಸಿದರು.

    ನಿಯಮದ ಪ್ರಕಾರ, ಶಾಸಕರಿಗೆ ನೀಡಿರುವ ನೋಟಿಸ್‌ಗೆ ಉತ್ತರ ನೀಡಲು ಏಳು ದಿನಗಳ ಕಾಲಾವಕಾಶ ನೀಡಬೇಕು ಎಂದು ಜೈನ್ ಹೇಳಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಪಕ್ಷಾಂತರ ವಿರೋಧಿ ಕಾನೂನು ಅನ್ವಯಿಸುವುದಿಲ್ಲ ಎಂದು ಜೈನ್ ವಾದಿಸಿದರು. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಪದೇ ಪದೇ ಇದನ್ನು ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದರು. 

    ಬಿಲ್ ಗೇಟ್ಸ್‌ಗೆ ‘KISS ಮಾನವೀಯ ಪ್ರಶಸ್ತಿ’ ನೀಡಿ ಸನ್ಮಾನಿಸಿದ ಅಚ್ಯುತ ಸಮಂತಾ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts