More

  ಮಹಾರಾಷ್ಟ್ರ: ಆಕೋಲಾ ಪಶ್ಚಿಮ ಕ್ಷೇತ್ರ ಚುನಾವಣೆ ರದ್ದು

  ನಾಗ್ಪುರ: ಮಹಾರಾಷ್ಟ್ರದ ವಿದರ್ಭದ ಅಕೋಲಾ-ಪಶ್ಚಿಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರದ್ದಾಗಿದೆ. ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ಚುನಾವಣೆಯನ್ನು ರದ್ದುಮಾಡಿ ಮಂಗಳವಾರ ಆದೇಶ ನೀಡಿದೆ. ಏಪ್ರಿಲ್ 26 ರಂದು ಉಪ ಚುನಾವಣೆ ನಿಗದಿಯಾಗಿತ್ತು.

  ಇದನ್ನೂ ಓದಿ: ಲಡಾಖ್‌ಗೆ ರಾಜ್ಯ ಸ್ಥಾನಮಾನ: 21 ದಿನಗಳ ಉಪವಾಸ ಅಂತ್ಯಗೊಳಿಸಿದ ಸೋನಮ್ ವಾಂಗ್‌ಚುಕ್

  ನ್ಯಾಯಮೂರ್ತಿಗಳಾದ ಅನಿಲ್ ಕಿಲೋರ್ ಮತ್ತು ಎಂಎಸ್ ಜವಾಲ್ಕರ್ ಅವರ ವಿಭಾಗೀಯ ಪೀಠವು ಕಳೆದ ವರ್ಷ ನವೆಂಬರ್ 3 ರಂದು ಈ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಗೋವರ್ಧನ್ ಶರ್ಮಾ ನಿಧನರಾಗಿದ್ದರು. ನಂತರ ತೆರವಾದ ವಿಧಾನಸಭಾ ಸ್ಥಾನಕ್ಕೆ ಯಾವುದೇ ಉಪಚುನಾವಣೆ ನಡೆಸಬಾರದು ಎಂದು ಹೇಳಿದೆ.

  ಪ್ರಸ್ತುತ ವಿಧಾನಸಭೆಯ ಅಂತ್ಯದ ಒಂದು ವರ್ಷಕ್ಕೂ ಕೆಳಗಿದ್ದರೆ ಉಪ ಚುನಾವಣೆ ನಡೆಸಬಾರದು ಎನ್ನುವ ಅರ್ಜಿದಾರರ ವಾದವನ್ನು ಎತ್ತಿ ಹಿಡಿದ ಹೈಕೋರ್ಟ್​ ಏಪ್ರಿಲ್​ 26ಕ್ಕೆ ನಡೆಯಬೇಕಿದ್ದ ಉಪ ಚುನಾವಣೆಯನ್ನು ರದ್ದುಗೊಳಿಸಿ ಚುನಾವಣಾ ಆಯೋಗ ವಿರುದ್ಧ ಆದೇಶ ನೀಡಿದೆ.

  ಉಪಚುನಾವಣೆ ಘೋಷಣೆಯಾದ ಬೆನ್ನೆಲ್ಲೇ ಅದರ ವಿರುದ್ದ ಅನಿಲ್​ ಧುಬೆ ಎಂಬ ವ್ಯಕ್ತಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

  ಕೇಜ್ರಿವಾಲ್ ಬಂಧನ ಪ್ರಕರಣ: ಪಾರದರ್ಶಕ ತನಿಖೆಯಾಗಲಿ ಭಾರತಕ್ಕೆ ಅಮೆರಿಕ ಸಲಹೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts