More

    ಕೇಜ್ರಿವಾಲ್ ಬಂಧನ ಪ್ರಕರಣ: ಪಾರದರ್ಶಕ ತನಿಖೆಯಾಗಲಿ ಭಾರತಕ್ಕೆ ಅಮೆರಿಕ ಸಲಹೆ!

    ನವದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕುರಿತಾಗಿ ಅಮೆರಿಕ ಸರ್ಕಾರ ಎಲ್ಲ ವರದಿಗಳನ್ನೂ ಗಮನಿಸುತ್ತಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರರು ಹೇಳಿದ್ದಾರೆ.

    ಇದನ್ನೂ ಓದಿ:  ಕಾಂಗ್ರೆಸ್​ಗೆ ಮತ್ತೊಂದು ಶಾಕ್!: ಕಾಂಗ್ರೆಸ್​ ತೊರೆದ ಹಾಲಿ ಸಂಸದ ಬಿಜೆಪಿ ಸೇರ್ಪಡೆ!

    ಭಾರತ ಸರ್ಕಾರವು ಸಿಎಂ ಕೇಜ್ರಿವಾಲ್ ಬಂಧನ ಕುರಿತಾದ ತನಿಖೆಯನ್ನು ಕಾನೂನು ಪ್ರಕ್ರಿಯೆಯು ಮುಕ್ತ ಹಾಗೂ ಪಾರದರ್ಶಕವಾಗಿ ನಡೆಸಿಕೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ.

    ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರ ಬಂಧನ ಪ್ರಕರಣ ಸಂಬಂಧ ಸರ್ಕಾರ ನ್ಯಾಯಸಮ್ಮತ ಹಾಗೂ ಪಕ್ಷಪಾತ ರಹಿತ ತನಿಖೆ ನಡೆಸಲಿದೆ ಎಂಬ ವಿಶ್ವಾಸವಿದೆ ಎಂದು ಜರ್ಮನಿ ದೇಶದ ವಿದೇಶಾಂಗ ಕಚೇರಿ ಕೂಡಾ ಹೇಳಿತ್ತು. ಜರ್ಮನಿಯ ಹೇಳಿಕೆ ನೀಡಿದ ಬೆನ್ನೆಲ್ಲೇ ಅಮೆರಿಕ ಕೂಡಾ ಕೇಜ್ರಿವಾಲ್ ಬಂಧನದ ಕುರಿತಾಗಿ ಭಾರತ ಸರ್ಕಾರಕ್ಕೆ ತನ್ನ ಸಲಹೆ ನೀಡಿದೆ.

    ಅರವಿಂದ್​ ಕ್ರೇಜಿವಾಲ್​ ಬಂಧನ ಕುರಿತು ಜರ್ಮನಿ ನೀಡಿದ್ದ ಹೇಳಿಕೆಗೆ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಸಂಬಂಧ ನವದೆಹಲಿಯಲ್ಲಿರುವ ಜರ್ಮನ್ ರಾಯಭಾರಿ ಎದುರು ತನ್ನ ಪ್ರತಿಭಟನೆ ದಾಖಲಿಸಿದೆ. ಜರ್ಮನಿಯ ಹೇಳಿಕೆಯು ‘ಭಾರತದ ಆಂತರಿಕ ವಿಷಯದಲ್ಲಿನ ಲಜ್ಜೆಗೇಡಿ ಹಸ್ತಕ್ಷೇಪ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಚಾಟಿ ಬೀಸಿತ್ತು.

    ನಮ್ಮ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮತ್ತು ನಮ್ಮ ನ್ಯಾಯಾಂಗದ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವಂತಹ ಹೇಳಿಕೆಗಳನ್ನು ನಾವು ಇದರಲ್ಲಿ ಗಮನಿಸಿದ್ದೇವೆ. ಕಾನೂನು ತಕ್ಷಣದ ವಿಷಯದಲ್ಲಿ ತನ್ನದೇ ಆದ ಮಾರ್ಗವನ್ನು ತೆಗೆದುಕೊಳ್ಳುತ್ತದೆ. ಈ ಬಗ್ಗೆ ಮಾಡಲಾದ ಪಕ್ಷಪಾತದ ಊಹೆಗಳು ಅತ್ಯಂತ ಅನಪೇಕ್ಷಿತ ಎಂದು ” ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ಅಮೆರಿಕ ವಿದೇಶಾಂಗ ಇಲಾಖೆಯ ಈ ಹೇಳಿಕೆಗೆ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ರಾಜಕೀಯಕ್ಕೆ ಎಂಟ್ರಿ ಕೊಟ್ಟ ಖ್ಯಾತ ನಟಿ ಅನುಷ್ಕಾ ಶೆಟ್ಟಿ..! ಈ ಪಕ್ಷದಿಂದ ಎಂಎಲ್​ಎ ಎಲೆಕ್ಷನ್‌ಗೆ ಸ್ಪರ್ಧೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts