

ಬೆಂಗಳೂರು: ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಬಹುನಿರೀಕ್ಷಿತ 'ಯಶ್ 19' ಚಿತ್ರದ ಅಸಲಿ ಟೈಟಲ್ ಇಂದು ಅಧಿಕೃತವಾಗಿ ಅನಾವರಣಗೊಂಡಿದ್ದು, ಚಿತ್ರಕ್ಕೆ 'ಟಾಕ್ಸಿಕ್' ಎಂಬ ಖಡಕ್ ಶೀರ್ಷಿಕೆ ಇಡಲಾಗಿದೆ. ಸದ್ಯ ಈ ಸುದ್ದಿ ಸಹ್ರಸಾರು ಸಂಖ್ಯೆಯ ಯಶ್ ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದೆ.
ಹೆಸರಾಂತ ಪ್ರೊಡಕ್ಷನ್ ಹೌಸ್ ಆದ ಕೆವಿಎನ್ ನಿರ್ಮಾಣ ಸಂಸ್ಥೆ ಯಶ್ ಅವರ ಮುಂದಿನ ಸಿನಿಮಾ ನಿರ್ಮಿಸುತ್ತಿದ್ದು, ವಿಭಿನ್ನ ಹಾಗೂ ವಿಶೇಷ ರೀತಿಯಲ್ಲಿ ಟೈಟಲ್ ರಿವೀಲ್ ವಿಡಿಯೋವನ್ನು ಎಡಿಟ್ ಮಾಡಿ ಬಿಡುಗಡೆಗೊಳಿಸಿದೆ. ಮಾಸ್ಟರ್ಪೀಸ್ ಲುಕ್ನಲ್ಲಿ ಕಾಣಿಸಿಕೊಂಡ ಯಶ್ 'ಟಾಕ್ಸಿಕ್' ಶೀರ್ಷಿಕೆಯಲ್ಲಿ ಮಿಂಚಿದ್ದಾರೆ. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ಗಳಿಸುತ್ತಿದೆ.
ಯಶ್ ನಟನೆಯ ಬಹುನಿರೀಕ್ಷಿತ ಸಿನಿಮಾ ಇದಾಗಿದ್ದು, ಟೈಟಲ್ ಕೇಳಿ ಅಭಿಮಾನಿಗಳು ಒಂದೆಡೆ ಖುಷಿಪಟ್ಟರು ಕೂಡ ಮತ್ತೊಂದೆಡೆ ಬೇಸರ ಹೊರಹಾಕಿದ್ದಾರೆ. ಇದಕ್ಕೆ ಕಾರಣ 'ಟಾಕ್ಸಿಕ್' 2025ರ ಏಪ್ರಿಲ್ 10 ರಂದು ಸಿನಿಪ್ರೇಕ್ಷಕರ ಮುಂದೆ ಹಾಜರಾಗಲಿದೆ ಎಂಬ ಸಂಗತಿ,(ಏಜೆನ್ಸೀಸ್).