ಸಿದ್ದಾಪುರ: ತಾಲೂಕಿನ ತ್ಯಾಗ್ಲಿಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ರಥೋತ್ಸವದ ಅಂಗವಾಗಿ ನಾಗರಾಜ ಜೋಶಿ ಸೋಂದಾ ಇವರ ಸಂಯೋಜನೆಯಲ್ಲಿ ಶಬರ ಸಂಸ್ಥೆ ಸೋಂದಾ ಇವರಿಂದ ಶನಿವಾರ ಮಾರುತಿ ಪ್ರತಾಪ ಯಕ್ಷಗಾನ ಪ್ರದರ್ಶನಗೊಂಡಿತು.
ಹಿಮ್ಮೇಳದಲ್ಲಿ ಕೃಷ್ಣ ಹೆಗಡೆ ಕನಕನಳ್ಳಿ, ಶ್ರೀಪಾದ ಭಟ್ಟ ಮೂಡಗಾರ್, ವಿಘ್ನೇಶ್ವರ ಗೌಡ ಕೆಸರಕೊಪ್ಪ ಸಹಕರಿಸಿದರು. ಮುಮ್ಮೇಳದಲ್ಲಿ ಉಮೇಶ ಹೆಗಡೆ ಹೆಗಡೆಕಟ್ಟಾ, ಪ್ರವೀಣ ಹೆಗಡೆ ತಟ್ಟೀಸರ, ನಿರಂಜನ ಜಾಗ್ನಳ್ಳಿ, ಮಹಾಬಲೇಶ್ವರ ಗೌಡ, ಶ್ರೀಧರ ಹೆಗಡೆ ಚಪ್ಪರಮನೆ, ಸದಾಶಿವ ಮಲವಳ್ಳಿ, ಅವಿನಾಶ ಕೊಪ್ಪ, ಮಹಾಲಕ್ಷ್ಮೀ ಜೋಶಿ ಸೋಂದಾ ವಿವಿಧ ಪಾತ್ರನಿರ್ವಹಿಸಿದರು. ಇದಕ್ಕೂ ಪೂರ್ವದಲ್ಲಿ ಸ್ಥಳೀಯ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.