'ಮಗಳೇ ದಯವಿಟ್ಟು ನನ್ನನ್ನು ಕ್ಷಮಿಸು'... ಮನಕಲಕುವಂತಿದೆ ತಂದೆಯ ಡೆತ್​​ನೋಟ್

pic suscide
Published on

ಯಾದಗಿರಿ: ಫೈನಾನ್ಸ್​​ ಕಂಪನಿಯಲ್ಲಿ ಸಾಲ ಮಾಡಿಕೊಂಡಿದ್ದ ಯುವ ರೈತನೊಬ್ಬ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಹಾಪುರ ನಗರ ಹಳಿಸಾಗರ ಬಡಾವಣೆಯಲ್ಲಿ ನಡೆದಿದೆ.

ನಿಂಗಪ್ಪ ಹಳೆಮನಿ (32) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವ ರೈತ. ಬಸವೇಶ್ವರ ಫೈನಾನ್ಸ್ ನಲ್ಲಿ 50 ಸಾವಿರ ರೂ. ಸಾಲ ಪಡೆದಿದ್ದ ನಿಂಗಪ್ಪ, ಬಡ್ಡಿ ಕಟ್ಟಲಾಗದೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಡೆತ್​ನೋಟ್-ಮೊಬೈಲ್ ಸ್ಟೇಟಸ್:

ಹೆಂಡತಿಗೆ ಸರ್ಕಾರಿ ಉದ್ಯೋಗ ನೀಡಿ, ಮಗಳ ಜೀವನ ಉತ್ತಮವಾಗಿ ನಡೆಸಲು ಅನುಕೂಲ ಮಾಡಿ ಕೊಡಿ ಎಂದು ತನ್ನ ಮೊಬೈಲ್ ಸ್ಟೇಟಸ್ ನಲ್ಲಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾನೆ.
ಡೆತ್​ನೋಟ್ ಮತ್ತು ಸ್ಟೇಟಸ್ ನಲ್ಲಿ, ತಂದೆ-ತಾಯಿಗೆ ಕ್ಷಮೆ ಕೇಳಿದ್ದು, ತನ್ನ ಮಗಳಿಗೆ ತಾನು ಭೂಲೋಕ ಬಿಟ್ಟು ಹೋಗುತ್ತಿದ್ದೇನೆ ದಯವಿಟ್ಟು ಕ್ಷಮಿಸು ಎಂದು ಬರೆದುಕೊಂಡಿದ್ದಾರೆ.

ಈ ಸಂಬಂಧ ಶಹಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net