

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಮತ್ತು ಚಿತ್ರಕಥಾಕಾರರಾಗಿ ಸಕ್ರಿಯರಾಗಿರುವ ನಟ, ಖ್ಯಾತ ಪತ್ರಕರ್ತ ಅಗ್ನಿ ಶ್ರೀಧರ್ ಇತ್ತೀಚೆಗಷ್ಟೇ ವಿಜಯವಾಣಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ ಹಲವಾರು ರೋಚಕ ಸಂಗತಿಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ನರಬಲಿ ಈಗಲೂ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಗ್ನಿ ಶ್ರೀಧರ್, "ಬಹಳಷ್ಟು ಜನ ನರಬಲಿ ಅನ್ನೋದನ್ನ ಹೇಗೆ ಪರಿಗಣಿಸಿದ್ದಾರೆ ಅಂದ್ರೆ, ನಮ್ಮ ಕಾಲಘಟ್ಟದಲ್ಲಿ ಅದು ಹೆಚ್ಚು ಸಂಭವಿಸುತ್ತಿಲ್ಲ ಅಂತ. ಯಾಕೆ ನಡಿತಿಲ್ಲ ಅಂದರೆ ನಮಗೆ ಗೊತ್ತಿಲ್ಲ ಅದಕ್ಕೆ. ಏನು ನರಬಲಿ ಅಂದರೆ ಜಾತ್ರೆಯಲ್ಲಿ ಕುರಿ ಕೊಟ್ಟಂಗೆ ಕೊಡಲು ಆಗುತ್ತಾ? ಎಲ್ಲಾ ಕಾಲದಲ್ಲಿಯೂ ಗೌಪ್ಯವಾಗಿ ನಡಿತಿತ್ತು, ಈಗಲೂ ತುಂಬ ನಡೆಯುತ್ತಿದೆ" ಎಂದರು.
"ತಿಂಗಳಿಗೆ ಎರಡೂ ಅಥವಾ ಮೂರು ಬಾರಿ ಒಂದಲ್ಲ ಒಂದು ಇಂತಹ ಘಟನೆಯ ವರದಿ ಪತ್ರಿಕೆಯಲ್ಲಿ ಇದ್ದೇ ಇರುತ್ತದೆ. ಮತ್ತು ವರ್ಷದಲ್ಲಿ ಹೆಚ್ಚು ಕಡಿಮೆ ಸಾವಿರ ಇದೇ ರೀತಿಯ ಘಟನೆ ಭಾರತದಲ್ಲಿ ನಡೆಯುತ್ತೆ. ಅಂದ್ರೆ, ಕೇಸ್ ಆಗುವುದನ್ನು ಅರ್ಥಮಾಡಿಕೊಳ್ಳಿ. ಎಲ್ಲವೂ ಕೇಸ್ ಆಗಲ್ಲ. ಎಲ್ಲೋ ಒಂದು ನೂರಕ್ಕೆ ಒಂದು ಹೊರಗೆ ಬರುತ್ತದೆ. ಯಾಕಂದ್ರೆ ಅತ್ಯಂತ ಗೌಪ್ಯವಾಗಿ ಜರಗುವಂತ ಕ್ರಿಯೆಯಿದು. ಇದು ರೇಪ್ ಪ್ರಕರಣದ ರೀತಿ ಅಲ್ಲವೇ ಅಲ್ಲ" ಎಂದರು.
"ಸಮಾಜ ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ಎಲ್ಲೋ ಸ್ಮಶಾನದ ಮೂಲೆಯಲ್ಲಿ............." ಮತ್ತಷ್ಟು ರೋಚಕ ಸಂಗತಿಗಳನ್ನು ತಿಳಿಯಲು ಕೆಳಗಿನ ಸಂದರ್ಶನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.