

ಬಿಜೆಪಿಯೊಂದಿಗೆ ಬಿಎಸ್ಪಿ ಮೈತ್ರಿ ಎಂದಿಗೂ ಸಾಧ್ಯವೇ ಇಲ್ಲ ಎಂದು ಮುಖ್ಯಸ್ಥೆ ಮಾಯಾವತಿ ಖಡಾಖಂಡಿತವಾಗಿ ಹೇಳಿದ್ದಾರೆ.
ಬಿಜೆಪಿಯನ್ನು ಕೋಮುವಾದಿ ಮತ್ತು ಜಾತಿವಾದಿ ಎಂದಿರುವ ಮಾಯಾವತಿ, ಬಿಜೆಪಿಯೊಂದಿಗೆ ಕೈ ಜೋಡಿಸುವುದಕ್ಕಿಂತ ರಾಜಕೀಯದಿಂದಲೇ ನಿವೃತ್ತಿ ಪಡೆಯುವುದು ಉತ್ತಮ ಎಂಬುದು ನನ್ನ ಭಾವನೆ ಎಂದಿದ್ದಾರೆ.
ಸಮಾಜವಾದಿ ಪಾರ್ಟಿಯನ್ನು ಸೋಲಿಸುವುದಕ್ಕೋಸ್ಕರ ಬಿಎಸ್ಪಿ ಪಕ್ಷ, ಬಿಜೆಪಿ ಅಥವಾ ಇನ್ಯಾವುದೇ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಲು ಸಿದ್ಧವಿದೆ ಎಂದು ಕಳೆದವಾರ ಮಾಯಾವತಿ ಹೇಳಿದ್ದರು. ಆದರೆ ಅದಾದ ಬಳಿಕ ಬಿಎಸ್ಪಿ-ಬಿಜೆಪಿ ಮೈತ್ರಿ ಮಾಡಿಕೊಳ್ಳಲಿವೆ ಎಂಬರ್ಥದ ಹೇಳಿಕೆಗಳನ್ನು ಕಾಂಗ್ರೆಸ್, ಎಸ್ಪಿ ಪಕ್ಷಗಳು ನೀಡಲು ಶುರುಮಾಡಿದ್ದವು. ಇದನ್ನೂ ಓದಿ: ಶಾರುಖ್ ಹುಟ್ಟುಹಬ್ಬಕ್ಕೆ ಜೂಹಿ ಚಾವ್ಲಾ ಕಡೆಯಿಂದ ಮನಮೆಚ್ಚುವ ಕಾರ್ಯ
ಇದೀಗ ಸ್ಪಷ್ಟನೆ ನೀಡಿದ ಮಾಯಾವತಿ, ಈಗ ಅಥವಾ ಭವಿಷ್ಯದಲ್ಲಿ ಯಾವುದೇ ಚುನಾವಣೆಯಲ್ಲೂ ಬಿಎಸ್ಪಿ-ಬಿಜೆಪಿ ಮೈತ್ರಿ ಸಾಧ್ಯವೇ ಇಲ್ಲ. ನಾವು ಕೋಮುವಾದಿ ಪಕ್ಷದೊಂದಿಗೆ ಹೊಂದಿಕೊಂಡು ಚುನಾವಣೆ ಎದುರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಎಲ್ಲ ಧರ್ಮ, ಜಾತಿಯ ಪ್ರತಿಯೊಬ್ಬರಿಗೂ ಅನುಕೂಲ ಕಲ್ಪಿಸಿಕೊಡುವುದು ನಮ್ಮ ಸಿದ್ಧಾಂತ. ಆದರೆ ಬಿಜೆಪಿಯದ್ದು ಕೋಮುವಾದ, ಜಾತಿವಾದ, ಬಂಡವಾಳಶಾಹಿ ಸಿದ್ಧಾಂತ. ನಮ್ಮ ನಡುವೆ ಮೈತ್ರಿ ಸಾಧ್ಯವೇ ಇಲ್ಲ ಎಂದಿದ್ದಾರೆ.