ಪ್ರಧಾನಿ ನರೇಂದ್ರ ಮೋದಿ ಭವಿಷ್ಯ ಟ್ರಂಪ್​ಗಿಂತಲೂ ಕೆಟ್ಟದಾಗಿರಲಿದೆ ಎಂದ ಈ ದೊಡ್ಡ ರಾಜಕಾರಣಿ

modi
modi
Published on

ಕಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಂತೆಯೆ ಆಡಳಿತಾರೂಢ ಟಿಎಂಸಿ ಹಾಗೂ ಅಧಿಕಾರ ಹಿಡಿಯಬೇಕು ಎನ್ನುತ್ತಿರುವ ಬಿಜೆಪಿ ನಡುವೆ ವಾಕ್ಸಮರ ಮುಂದುವೆದಿದೆ.

ಹೂಗ್ಲಿಯಲ್ಲಿ ಇಂದು ಆಯೋಜಿಸಿದ್ದ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, 'ಪ್ರಧಾನಿ ನರೇಂದ್ರ ಮೋದಿ ಹಣೆಬರಹ ಟ್ರಂಪ್​ಕ್ಕಿಂತಲೂ ಕೆಟ್ಟದಾಗಿರಲಿದೆ' ಎಂದು ಭವಿಷ್ಯ ನುಡಿದಿದ್ದಾರೆ.

mamata
mamata

ಪ್ರಧಾನಿಯನ್ನು ದಗಾಕೋರ, ರಾಕ್ಷಸ ಎಂದು ಛೇಡಿಸಿರುವ ಅವರು, ಪ್ರಧಾನ ಮಂತ್ರಿಯೊಬ್ಬ ಈ ದೇಶದಲ್ಲಿ ದೊಡ್ಡ ದಂಗೇಕೋರ ಎಂದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ನಾನು ಗೋಲ್​ ಕೀಪರ್ ಆಗಿ ಕೆಲಸ ಮಾಡುತ್ತೇನೆ. ಬಿಜೆಪಿಗೆ ಒಂದೇ ಒಂದು ಗೋಲ್ ಹೊಡೆಯಲು ಬಿಡುವುದಿಲ್ಲ ಎಂದು ಆವಾಜ್ ಹಾಕಿದ್ದಾರೆ.

ಮಮತ ಅಳಿಯ ಅಭಿಷೇಕ ಬ್ಯಾನರ್ಜಿ ಮೇಲೆ ಸಿಬಿಐ ದಾಳಿ ನಡೆದ ನಂತರ ಈ ರೀತಿಯ ಕಟು ಮಾತುಗಳಿಂದ ಪ್ರಧಾನಿ ಮೋದಿಯನ್ನು ತೆಗಳಿದ್ದಾರೆ. ಇದೇ ರಾಲಿಯಲ್ಲಿ ಕ್ರಿಕೆಟಿಗ ಮನೋಜ್ ತಿವಾರಿ, ನಟರಾದ ಸಯೋನಿ ದತ್ತ, ಜುನಿ ಮಾಲಿಯಾ ಸೇರಿದಂತೆ ಹಲವು ಗಣ್ಯರು ಟಿಎಂಸಿ ಸೇರ್ಪಡೆಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net