ಬಿಹಾರದಲ್ಲಿ ಹಾಡಹಗಲೇ ಗುಂಡಿನ ಚಕಮಕಿ: ದುಷ್ಕರ್ಮಿಗಳ ಗುಂಡೇಟಿಗೆ ಇನ್ಸ್​ಪೆಕ್ಟರ್ ಬಲಿ

Bihar
shootout
Published on

ಪಾಟ್ನಾ: ಬಿಹಾರದಲ್ಲಿ ಹಾಡಹಗಲೇ ದುಷ್ಕರ್ಮಿಗಳು ಅಟ್ಟಹಾಸ ಮೆದದಿದ್ದಾರೆ. ಹೌದು, ಅಕ್ರಮ ಶಸ್ತ್ರಾಸ್ತ್ರದ ತಪಾಸಣೆಗೆ ತೆರಳಿದ್ದ ಪೊಲೀಸ್ ತಂಡದ ಮೇಲೆ ದುಷ್ಕರ್ಮಿಗಳ ಗುಂಡಿನ ದಾಳಿ ನಡೆಸಿದ್ದಾರೆ.

ಬಿಹಾರದ ಸೀತಮರ್ಹಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ದಿನೇಶ್ ಶಾ ಮೃತಪಟ್ಟಿದ್ದಾರೆ. ಚೌಕಿದಾರ್ ಲಾಲ್‌ಬಾಬು ಸೇರಿದಂತೆ ಇನ್ನಿತರ ಪೊಲೀಸರಿಗೆ ಗಾಯವಾಗಿದೆ. ಅಕ್ರಮ ಮಧ್ಯ, ಶಸ್ತ್ರಾಸ್ತ್ರ ಸಾಗಾಣಿಕೆ ಸೇರಿದಂತೆ 12ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪತ್ತೆ ಹಚ್ಚಲು ಕನ್ಯೆಯ ಗ್ರಾಮದ ಮೇಲೆ ದಾಳಿ ನಡೆಸಿದ್ದ ಪೊಲೀಸ್​ ತಂಡದ ಮೇಲೆ ದಾಳಿ ಮಾಡಲಾಗಿದೆ.

ಸ್ಥಳಕ್ಕೆ ಸೀತಮರ್ಹಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ದೌಡಾಯಿಸಿದ್ದು, ಆರೋಪಿಗಳ ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ವರದಿಗಳು ತಿಳಿಸಿವೆ. (ಏಜೇನ್ಸಿಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net