ಹೊಲಗಳಲ್ಲಿ ಪೂಜೆ ಸಲ್ಲಿಕೆ

skp hunnime
ಸಾಲೂರಿನ ಶ್ರೀ ಗುರುಲಿಂಗ ಜಂಗಮ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಮಠದ ತೋಟದಲ್ಲಿ ಭೂಮಿಪೂಜೆ ನೆರವೇರಿಸಿದರು.
Published on

ಶಿಕಾರಿಪುರ: ರೈತರಿಗೆ ಬಹುಮುಖ್ಯ ಹಬ್ಬಗಳಲ್ಲಿ ಒಂದಾದ ಭೂಮಿ ಹುಣ್ಣಿಮೆಯನ್ನು ತಾಲೂಕಿನಾದ್ಯಂತ ರೈತರು ಸಂಭ್ರಮದಿಂದ ಆಚರಿಸಿದರು. ಈ ವರ್ಷ ನಿರಂತರವಾಗಿ ಸುರಿದ ಮಳೆಯಿಂದ ಮೆಕ್ಕೆಜೋಳ, ಅಡಕೆ ಬೆಳೆ ಹಾನಿಗೀಡಾಗಿದ್ದರೂ ರೈತರು ಭೂಮಿತಾಯಿಯ ಹಬ್ಬವನ್ನಾಚರಿಸಿದರು. ಹಬ್ಬದ ಹಿಂದಿನ ದಿನವೇ ಕೃಷಿಕರು ಹೊಲ, ಗದ್ದೆ, ತೋಟಗಳಲ್ಲಿ ಪೂಜೆ ಮಾಡುವ ಸ್ಥಳವನ್ನು ಸ್ವಚ್ಛಗೊಳಿಸಿದ್ದರು. ಮಹಿಳೆಯರು ಮಂಗಳವಾರ ಮಡಿಯುಟ್ಟು ಹಬ್ಬದ ತಯಾರಿ ನಡೆಸಿದರು. ವಿವಿಧ ಖಾದ್ಯಗಳನ್ನು ಸಿದ್ಧಪಡಿಸಿದರು. ಕುಟುಂಬ ಸಮೇತರಾಗಿ ಜಮೀನುಗಳಿಗೆ ತೆರಳಿ ಭೂಮಿತಾಯಿಯನ್ನು ಸಿಂಗರಿಸಿ ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net