ವಿಶ್ವದ ಅತ್ಯಂತ ಕಡಿಮೆ ಭ್ರಷ್ಟ ದೇಶಗಳ ಪಟ್ಟಿ ಬಹಿರಂಗ..ಭಾರತಕ್ಕೆ ಯಾವ ಸ್ಥಾನ?

coreption
Published on

ನವದೆಹಲಿ: ವಿಶ್ವದ ಅತ್ಯಂತ ಭ್ರಷ್ಟ ರಾಷ್ಟ್ರಗಳ ಪಟ್ಟಿ ಬಿಡುಗಡೆಯಾಗಿದೆ, 2023 ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಭಾರತವು 180 ದೇಶಗಳ ಪೈಕಿ 93 ನೇ ಸ್ಥಾನದಲ್ಲಿದೆ. ಜಗತ್ತಿನ ಹಲವೆಡೆ ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಹೋರಾಟವು ಹೆಚ್ಚು ಪರಿಣಾಮ ಬೀರಿದಂತೆ ಕಾಣುತ್ತಿಲ್ಲ. ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ(ಸಿಪಿಐ) ಇಂತಹ ಸೂಚನೆ ನೀಡಿದೆ.

ಈ ಪಟ್ಟಿಯಲ್ಲಿರುವ ಮೂರನೇ ಎರಡರಷ್ಟು ದೇಶಗಳು 50ಕ್ಕಿಂತ ಕಡಿಮೆ ಅಂಕ ಗಳಿಸಿವೆ. 180 ದೇಶಗಳ ಪಟ್ಟಿಯಲ್ಲಿ ಡೆನ್ಮಾರ್ಕ್​ ಸತತ 6ನೇ ವರ್ಷವೂ ಅಗ್ರಸ್ಥಾನದಲ್ಲಿದೆ. ಅಂದರೆ ಆ ದೇಶದಲ್ಲಿ ಕಡಿಮೆ ಭ್ರಷ್ಟಾಚಾರ ಕಂಡುಬಂದಿದೆ. ಆದರೆ ಸೋಮಾಲಿಯಾ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು, ಹೆಚ್ಚು ಭ್ರಷ್ಟಾಚಾರ ನಡೆಯುವ ದೇಶವಾಗಿದೆ.

ಸಿಪಿಐ ಪಟ್ಟಿಯನ್ನು ಬಿಡುಗಡೆ ಮಾಡುವ ಟ್ರಾನ್ಸ್​ಫರೆನ್ಸಿ ಇಂಟರ್​ನ್ಯಾಷನಲ್ ಪ್ರಕಾರ ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ 12 ದೇಶಗಳಲ್ಲಿ 2018ರಿಂದ ಭ್ರಷ್ಟಾಚಾರ ಇಳಿಮುಖವಾಗಿದೆ. ಎಲ್ ಸಾಲ್ವಡಾರ್, ಹೊಂಡುರಾಸ್, ಲೈಬೀರಿಯಾ, ಮ್ಯಾನ್ಮಾರ್, ನಿಕರಾಗುವಾ, ಶ್ರೀಲಂಕಾ ಮತ್ತು ವೆನೆಜುವೆಲಾದಲ್ಲಿ ಸ್ಕೋರ್ 30ಕ್ಕಿಂತ ಕಡಿಮೆ.

ಅದೇ ರೀತಿ ಅರ್ಜೆಂಟೀನಾ, ಆಸ್ಟ್ರೀಯಾ, ಪೋಲೆಂಡ್​, ಟರ್ಕಿ ಹಾಗೂ ಯುನೈಟೆಡ್ ಕಿಂಗ್​ಡಮ್, ಐರ್ಲೆಂಡ್​, ದಕ್ಷಿಣ ಕೊರಿಯಾ, ಅರ್ಮೇನಿಯಾ, ವಿಯೆಟ್ನಾಂ, ಮಾಲ್ಡೀವ್ಸ್​, ಅಂಗೋಲಾ ಮತ್ತು ಉಜ್ಬೇಕಿಸ್ತಾನ್ ನಂತಹ ಕೆಲವು ಉನ್ನತ ಹಾಗೂ ಮಧ್ಯಮ ಆದಾಯದ ದೇಶಗಳಲ್ಲಿ ಸ್ಕೋರ್ ಸುಧಾರಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.

ಭಾರತಕ್ಕೆ ಯಾವ ಸ್ಥಾನ: ಭಾರತವು39ಅಂಕಗಳೊಂದಿಗೆ 93ನೇ ಸ್ಥಾನದಲ್ಲಿದೆ ಭಾರತವು 2023ರ ಸಿಪಿಐನಲ್ಲಿ 39 ಅಂಕಗಳೊಂದಿಗೆ 93ನೇ ಸ್ಥಾನದಲ್ಲಿದೆ. ಆದರೆ ನೆರೆಯ ರಾಷ್ಟ್ರ ಚೀನಾ 76 ಅಂಕ ಪಡೆದು 42ನೇ ಸ್ಥಾನದಲ್ಲಿದೆ. ವಿಶೇಷವೆಂದರೆ 2022ರಿಂದ ಚೀನಾದ ಅಂಕ 3ರಷ್ಟು ಕಡಿಮೆಯಾಗಿದೆ. ಪಾಕಿಸ್ತಾನವು 133ನೇ ಸ್ಥಾನದಲ್ಲಿದೆ, ಆ ದೇಶ 29 ಅಂಕಗಳನ್ನು ಪಡೆದಿದ್ದಾರೆ. ಅಫ್ಘಾನಿಸ್ತಾನ 20 ಅಂಕಗಳೊಂದಿಗೆ 162ನೇ ಸ್ಥಾನದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net