More

    ಈ ಮನೆ ಮುಂದೆ ಪಾರ್ಕಿಂಗ್​ ಮಾಡಿದ್ರೆ ಶಾಪಕ್ಕೆ ಗುರಿಯಾಗ್ತೀರಿ ಹುಷಾರ್​!

    ಬೆಂಗಳೂರು: ಮನೆಯೊಂದರ ಮುಂದೆ ‘ಪಾರ್ಕಿಂಗ್ ನಿಷೇಧಿಸಲಾಗಿದೆ’ ಎಂದು ಬರೆದ ಸೈನ್‌ಬೋರ್ಡ್‌ ಆ ಮಾರ್ಗದಲ್ಲಿ ಸಂಚರಿಸುವವರನ್ನು ಅಚ್ಚರಿಗೊಳಿಸುತ್ತಿದೆ. ಮನೆ ಮುಂಭಾಗ ಗೇಟಿಗೆ ನೇತುಹಾಕಿರುವ ಫಲಕ ‘ಶಾಪ’ಕ್ಕೆ ಗುರಿಯಾಗಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

    ಇದನ್ನೂ ಓದಿ: ಮಾಲ್ಡೀವ್ಸ್‌ನಲ್ಲಿ ಉಲ್ಬಣಿಸಿದ ರಾಜಕೀಯ ಘರ್ಷಣೆ: ಪ್ರಾಸಿಕ್ಯೂಟರ್ ಜನರಲ್​ಗೆ ಇರಿತ !

    ರಾಜಧಾನಿಯಲ್ಲಿ “ಪೀಕ್ ಬೆಂಗಳೂರು” ಟ್ರಾಫಿಕ್​ ಸೇರಿದಂತೆ ಇತರ ವಿಶಿಷ್ಟ ಘಟನೆಗಳ ಕುರಿತು ವಿವರಿಸಲು ವಿವರಿಸಲು ಇರುವ ಸೋಷಿಯಲ್​ಮೀಡಿಯಾ ಆಗಿದೆ. ಇದೀಗ ಇದೇ ಪದ ಪಾರ್ಕಿಂಗ್​ ವಿಚಾರಕ್ಕೆ ಸುದ್ದಿ ಆಗುತ್ತಿರುವುದು ಇದೊಂದು ಮನೆ ಮುಂದೆ ಹಾಕಿರುವ ‘ಪಾರ್ಕಿಂಗ್ ನಿಷೇಧ’ ಫಲಕದಿಂದ. ಇಷ್ಟಕ್ಕೂ ಇದರಲ್ಲಿ ಇರುವ ಈ ಶಾಪ ವಾದರೂ ಏನೆಂದು ನೋಡುವುದಾದರೆ..

    “ಪಾರ್ಕಿಂಗ್ ನಿಷೇಧಿಸಲಾಗಿದೆ. ಇಲ್ಲಿ ಪಾರ್ಕಿಂಗ್​ ಮಾಡಿದರೆ ನಿಮ್ಮ ಪೂರ್ವಜನ ಕೆಂಗಣ್ಣು ನಿಮ್ಮ ಮೇಲೆ ಬೀಳತ್ತೆ. ನಿಮ್ಮ ಶೂಲೇಸ್‌ಗಳನ್ನು ಕಟ್ಟಲು ಬಿಡಲ್ಲ. ಕ್ರೋಧವುಳ್ಳ ಅಳಿಲುಗಳು ನಿಮ್ಮ ಮನೆಗೆ ಆಕ್ರಮಣ ಮಾಡುತ್ತವೆ. ನಿಮ್ಮ ಜೀವನದುದ್ದಕ್ಕೂ ಕೆಟ್ಟ ದಿನಗಳು ಬರುತ್ತದೆ. ನಿಮ್ಮ ರೆಫ್ರಿಜರೇಟರ್‌ನಲ್ಲಿರುವ ಆಹಾರವು ನಿಗೂಢವಾಗಿ ಹಾಳಾಗುತ್ತದೆ. ಬೇರೆಯವರು ಬಳಸಿದ, ಮರುಬಳಕೆಯಾದ ವಸ್ತುಗಳನ್ನ ಮಾತ್ರ ಉಡುಗೊರೆಯಾಗಿ ಸ್ವೀಕರಿಸುತ್ತಿದ್ದೀರಿ. ನಿಮ್ಮ ವಾಹನವು ಕರ್ಕಶ ಶಬ್ದ ಮಾಡಲು ಪ್ರಾರಂಭಿಸುತ್ತದೆ. ನಿಮ್ಮ ಟೈರ್‌ಗಳು ಶಾಶ್ವತವಾಗಿ ಗಾಳಿ ಇಲ್ಲದಂತಾಗುತ್ತದೆ. ಸೊಳ್ಳೆಗಳು ಇತರರನ್ನು ಬಿಟ್ಟು ಕಚ್ಚಲು ನಿಮ್ಮನ್ನೇ ಆರಿಸಿಕೊಳ್ಳುತ್ತದೆ. ಯಾರೂ ಪಾರ್ಟಿಗಳಲ್ಲಿ ನಿಮ್ಮೊಂದಿಗೆ ಮಾತನಾಡುವುದಿಲ್ಲ ಅಥವಾ ನಿಮ್ಮ ಜೋಕ್‌ಗಳನ್ನು ಕೇಳಿ ನಗುವುದಿಲ್ಲ. ಇರಲಿ ಎಚ್ಚರ, ಎಚ್ಚರ,ಎಚ್ಚರ”..ಹೀಗೆಂದು ಬರೆಯಲಾಗಿದೆ.

    ಇದರ ಫೋಟೋವನ್ನು @ಕ್ರಿಷ್ಣ ಸಿಕೆಪಿಎಸ್​ ಎಂಬ ಎಕ್ಸ್ (ಟ್ವಿಟರ್​) ಬಳಕೆದಾರ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಪಾರ್ಕಿಂಗ್ ನಿಷೇಧಿಸಲಾಗಿದೆ. ಇದು ಪೀಕ್ ಬೆಂಗಳೂರು. ಪಾರ್ಕಿಂಗ್ ಮಾಡೋರಿಗೆ ಈ ತರಹ ಶಾಪನಾ ಎಂದು ತಮ್ಮ ಪೋಸ್ಟ್​ಗೆ ಕ್ಯಾಪ್ಶನ್​ ನೀಡಿದ್ದಾರೆ. ಇದು ಭಯಾನಕವಾಗಿದೆ ಎಂದು ಒಬ್ಬ ನೆಟ್ಟಿಗ ಕಾಮೆಂಟ್​ ಮಾಡಿದರೆ, ಇನ್ನೊಬ್ಬರು ಈ ಬೋರ್ಡ್​ಕೋರಮಂಗಲದಲ್ಲಿರುವುದು ಎಂದು ಹೇಳಿದ್ದಾರೆ.

    ಕೆಲ ದಿನಗಳ ಹಿಂದಷ್ಟೆ “ಸ್ಮಾರ್ಟ್‌ಫೋನ್ ಜೋಂಬಿಗಳ ಬಗ್ಗೆ ಎಚ್ಚರವಿರಲಿ”ಎಂದು ಬೆಂಗಳೂರಿನಲ್ಲಿ ಹಾಕಲಾಗಿದ್ದ ಸೈನ್​ಬೋರ್ಡ್​ವೊಂದು ವೈರಲ್​ ಆಗಿತ್ತು. ಸ್ಮಾರ್ಟ್‌ಫೋನ್ ಜೋಂಬಿ ಎಂದರೆ ಸದಾ ಕಾಲ ಮೊಬೈಲ್​ನಲ್ಲೇ ಮುಳುಗಿರುವವರು ಎಂದರ್ಥ. ಇವರು ರಸ್ತೆದಾಟುವಾಗಲೂ ಮೊಬೈಲ್​ ಬಳಸುತ್ತಲೇ ಇರುತ್ತಾರೆ. ಇವರು ಆರ್ಥಿಕ ಉತ್ಪಾದನೆ ಕಡಿಮೆಯಾಗಲು ಮತ್ತು ಸಾಮಾಜಿಕ ಸಂಪರ್ಕ ಕಡಿತಕ್ಕೆ ಕಾರಣವಾಗುತ್ತಾರೆ ಮಾತ್ರವಲ್ಲ ಸುರಕ್ಷತೆ ವಿಚಾರದಲ್ಲಿ ಇವರು ಅಪಾಯ ಎನ್ನಲಾಗುತ್ತದೆ.

    ಕೇರಳ ಬಿಜೆಪಿ ಮುಖಂಡನ ಹತ್ಯೆ ಪ್ರಕರಣ:15ಪಿಎಫ್‌ಐ ಕಾರ್ಯಕರ್ತರಿಗೆ ಮರಣದಂಡನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts