More

    ಕೇರಳ ಬಿಜೆಪಿ ಮುಖಂಡನ ಹತ್ಯೆ ಪ್ರಕರಣ:15ಪಿಎಫ್‌ಐ ಕಾರ್ಯಕರ್ತರಿಗೆ ಮರಣದಂಡನೆ

    ತಿರುವನಂತಪುರಂ: ಹೆಂಡತಿ ಮತ್ತು ಮಕ್ಕಳ ಎದುರೇ ಬಿಜೆಪಿ ನಾಯಕನ ಹತ್ಯೆ ಮಾಡಿದ್ದ ಪ್ರಕರಣದ ವಿಚಾರಣೆ ನಡೆಸಿದ ಕೇರಳ ಕೋರ್ಟ್ ಮಹತ್ವದ ತೀರ್ಪು ನೀಡಿದೆ. 15 ಪಿಎಫ್‌ಐ ಕಾರ್ಯಕರ್ತರಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಲಾಗಿದೆ.

    ಇದನ್ನೂ ಓದಿ: ದಕ್ಷಿಣ ಕೊರಿಯಾ ಸಮುದ್ರದಲ್ಲಿ ಅಮೆರಿಕಾದ ಮತ್ತೊಂದು ಜೆಟ್​ ಫೈಟರ್​ ಪತನ: ಪೈಲಟ್ ಪಾರು

    ಕೊಲೆಯಾದ ರಂಜಿತ್ ಶ್ರೀನಿವಾಸನ್ ಅವರು ಕೇರಳ ಬಿಜೆಪಿಯ ಒಬಿಸಿ ನಾಯಕರಾಗಿದ್ದರು. 2021ರ ಡಿಸೆಂಬರ್‌ 19ರಂದು ಆಲಪುಜ್ಜದ ರಂಜಿತ್ ಮನೆಯಲ್ಲೇ 15ಮಂದಿ ಪಿಎಫ್ಐ ಕಾರ್ಯಕರ್ತರು ಹತ್ಯೆಗೈದಿದ್ದರು. ಹೆಂಡತಿ, ಮಕ್ಕಳು ಕಣ್ಣೆದುರೇ ರಂಜಿತ್ ಅವರನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

    ಬಿಜೆಪಿ ನಾಯಕ ರಂಜಿತ್ ಅವರ ಕೊಲೆ ಪ್ರಕರಣದಲ್ಲಿ ಪಿಎಫ್‌ಐ ಸದಸ್ಯರ ಕೈವಾಡ ಸಾಬೀತಾಗಿತ್ತು. 15 ಮಂದಿ ಪಿಎಫ್ಐ ಸದಸ್ಯರ ಈ ಕೊಲೆಗೆ ಕಾರಣವಾಗಿದ್ದು, ಕೇರಳದ ಮಾವೇಲಿಕ್ಕರ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ-I ಇಂದು ತನ್ನ ಮಹತ್ವದ ತೀರ್ಪು ಪ್ರಕಟ ಮಾಡಿದೆ. 15 ಮಂದಿ ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗಿದ್ದು, ಶಿಕ್ಷೆಯ ಪ್ರಮಾಣವನ್ನು ನಂತರ ಘೋಷಿಸುವುದಾಗಿ ಕೋರ್ಟ್ ತಿಳಿಸಿದೆ.

    ‘ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ’: ಸಿಎಂ ಸಿದ್ದರಾಮಯ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts