More

    ದಕ್ಷಿಣ ಕೊರಿಯಾ ಸಮುದ್ರದಲ್ಲಿ ಅಮೆರಿಕಾದ ಮತ್ತೊಂದು ಜೆಟ್​ ಫೈಟರ್​ ಪತನ: ಪೈಲಟ್ ಪಾರು

    ಸಿಯೋಲ್: ದಕ್ಷಿಣ ಕೊರಿಯಾದ ನೈರುತ್ಯ ಕರಾವಳಿಯ ಸಮುದ್ರ ದಲ್ಲಿ ಬುಧವಾರ ಎಫ್-16 ಯುದ್ಧ ವಿಮಾನ ಅಪಘಾತಕ್ಕೀಡಾಗಿದ್ದು, ನೀರಲ್ಲಿ ಮುಳುಗಿದೆ. ಪೈಲಟ್ ಸುರಕ್ಷಿತವಾಗಿ ಹೊರಬಂದಿದ್ದಾರೆ. ಬಂದರು ನಗರವಾದ ಸಿಯೋಸಾನ್ ಬಳಿ ಈ ದುರಂತ ಸಂಭವಿಸಿದೆ. ಎರಡು ತಿಂಗಳಳಲ್ಲಿ ಸಂಭವಿಸಿದ ಎರಡನೇ ವಿಮಾನ ದುರಂತ ಇದಾಗಿದೆ.

    ಇದನ್ನೂ ಓದಿ: ಗಡಿ ವಿವಾದ ಸಭೆ ನಡೆಸಲು ಕರ್ನಾಟಕ – ಮಹಾರಾಷ್ಟ್ರ ವಿಫಲ: ಎರಡೂ ರಾಜ್ಯಗಳಿಗೆ ಕೇಂದ್ರ ನೋಟಿಸ್

    ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಯುಎಸ್​ 8ನೇ ಫೈಟರ್ ವಿಂಗ್ ಹೇಳಿಕೆಯಲ್ಲಿ ತಿಳಿಸಿದೆ. ವಿಮಾನವು ಇದ್ದಕ್ಕಿದ್ದಂತೆ ಪೈಲಟ್​ ನಿಯಂತ್ರಣ ಕಳೆದುಕೊಂಡು ಸಮುದ್ರಕ್ಕೆ ಅಪ್ಪಳಿಸಿದೆ. ಪೈಲಟ್​ ಕೂಡಲೇ ಹೊರಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ.
    ಅಮೆರಿಕಾವು ತನ್ನ ಮಿತ್ರ ರಾಷ್ಟ್ರದ ರಕ್ಷಣಾ ಪಡೆಗಳಿಗೆ ನೆರವಾಗಲು ತನ್ನ ಯುದ್ಧ ವಿಮಾನಗ’ಳನ್ನು ದಕ್ಷಿಣ ಕೊರಿಯಾಗೆ ಕಳೂಹಿಸಿದೆ. ಆದರೆ ಒಂದರ ಹಿಂದೆ ಒಂದರಂತೆ ಈ ಯುದ್ಧ ವಿಮಾನಗಳು ಪತನವಾಗುತ್ತಿರುವುದು ದೊಡ್ಡಣ್ಣ ಅಮೆರಿಕಾ ಚಿಂತಾಕ್ರಾಂತವಾಗಿದೆ. ಅಪಘಾತದ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಎಂದು ವಿಂಗ್‌ನ ಕಮಾಂಡರ್ ಕರ್ನಲ್ ಮ್ಯಾಥ್ಯೂ ಸಿ. ಗೇಟ್ಕೆ ಹೇಳಿದರು.

    ನಾವು ವಿಮಾನದ ಹುಡುಕಾಟಕ್ಕೆ ಗಮನಹರಿಸಿದ್ದೇವೆ ಎಂದೂ ಅವರು ತಿಳಿಸಿದರು. ಎಫ್​ -16 ಸ್ಕ್ವಾಡ್ರನ್‌ಗಳನ್ನು ಒಳಗೊಂಡಿರುವ 8 ನೇ ಫೈಟರ್ ವಿಂಗ್ ಈ ಹಿಂದೆ ಡಿಸೆಂಬರ್‌ನಲ್ಲಿ ಅಪಘಾತಕ್ಕೀಡಾಗಿತ್ತು. ತರಬೇತಿ ಹಾರಾಟದ ಸಮಯದಲ್ಲಿ ಪೈಲಟ್ ಸಮಸ್ಯೆ ಎದುರಿಸಿದ್ದು, ಬಂದರು ನಗರವಾದ ಗುನ್ಸಾನ್ ಬಳಿ ಸಮುದ್ರದಲ್ಲಿ ಪಥನವಾಗಿತ್ತು.

    ‘ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ’: ಸಿಎಂ ಸಿದ್ದರಾಮಯ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts