More

    ಗಡಿ ವಿವಾದ ಸಭೆ ನಡೆಸಲು ಕರ್ನಾಟಕ – ಮಹಾರಾಷ್ಟ್ರ ವಿಫಲ: ಎರಡೂ ರಾಜ್ಯಗಳಿಗೆ ಕೇಂದ್ರ ನೋಟಿಸ್

    ನವದೆಹಲಿ: ಗಡಿ ವಿವಾದ ಬಗೆಹರಿಸಲು ವರ್ಷದ ಹಿಂದೆ ಸಮನ್ವಯ ಸಮಿತಿ ರಚಿಸಿದ್ದರೂ, ಸಭೆ ನಡೆಸಲು ವಿಫಲವಾದ ಹಿನ್ನೆಲೆಯಲ್ಲಿಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಕೇಂದ್ರ ಸರ್ಕಾರ ನೋಟಿಸ್ ಜಾರಿ ಮಾಡಿದೆ.

    ಇದನ್ನೂ ಓದಿ: ಪಾಕಿಸ್ತಾನ: ಇಮ್ರಾನ್ ಖಾನ್, ಬುಶ್ರಾ ಬೀಬಿಗೆ 14 ವರ್ಷ ಜೈಲು ಶಿಕ್ಷೆ

    2022ರಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳೊಂದಿಗೆ ದೆಹಲಿಯಲ್ಲಿ ಸಭೆ ನಡೆಸಿ ಸಮನ್ವಯ ಸಮಿತಿ ರಚಿಸಲಾಗಿತ್ತು. ಸಮಸ್ಯೆ ಪರಿಹಾರಕ್ಕಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲು ಕೇಂದ್ರ ಸೂಚಿಸಿತ್ತು. ಆದರೆ ಎರಡೂ ರಾಜ್ಯ ಸರ್ಕಾರಗಳು ಸಭೆ ನಡೆಸಲು ಒಲವು ತೋರದ ಹಿನ್ನೆಲೆಯಲ್ಲಿ ಕೇಂದ್ರ ನೋಟೀಸ್ ಜಾರಿ ಮಾಡಿದೆ.

    2023ರ ಮೇ ನಲ್ಲಿ ಅಧಿಕಾರ ವಹಿಸಿಕೊಂಡ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಗಡಿ ವಿವಾದಗಳ ಸಮನ್ವಯ ಸಮಿತಿಯ ಅಸ್ತಿತ್ವದ ಬಗ್ಗೆ ಅರಿವು ಹೊಂದಿರಲಿಲ್ಲ ಅಥವಾ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಮುಳುಗಿಹೋಗಿತ್ತು ಎನ್ನಬಹುದು. ಇಲ್ಲಿ ತನಕ ಸಮಿತಿ ರಚನೆ ಸಹ ಮಾಡಿಲ್ಲ ಎಂದು ತಿಳಿದು ಬಂದಿದೆ.

    ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಜೆ.ಸಿ.ಮಾಧುಸ್ವಾಮಿ ಮತ್ತು ಶಶಿಕಲಾ ಜೊಲ್ಲೆ ಕರ್ನಾಟಕವನ್ನು ಪ್ರತಿನಿಧಿಸಿದ್ದರೆ, ಚಂದ್ರಕಾಂತ್ ಪಾಟೀಲ್, ದೀಪಕ್ ಕೇಸರ್ಕರ್ ಮತ್ತು ಶಂಭುರಾಜ್ ದೇಸಾರಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿದ್ದರು.

    ಮೂರು ತಿಂಗಳಿಗೊಮ್ಮೆ ನಡೆಯದ ಸಭೆ:  ಮೊದಲ ಸಭೆ 2022 ರ ಡಿಸೆಂಬರ್ 14 ರಂದು ದೆಹಲಿಯಲ್ಲಿ ನಡೆದಿತ್ತು. ನಂತರದ ಸಭೆಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ನಿಗದಿಪಡಿಸಲಾಗಿತ್ತು. ಆದರೆ ಕರ್ನಾಟಕದಲ್ಲಿ ಹೊಸ ಸರ್ಕಾರ ರಚನೆಯಾಗಿ ಎಂಟು ತಿಂಗಳು ಕಳೆದರೂ ಹೊಸ ಸಮಿತಿಯನ್ನು ರಚಿಸುವಲ್ಲಿ ವಿಫಲವಾಗಿದೆ. ಗೃಹ ಸಚಿವಾಲಯದ ಸೂಚನೆಗಳನ್ನು ಕರ್ನಾಟಕ ನಿರ್ಲಕ್ಷಿಸಿದರೆ ಸುಪ್ರೀಂ ಕೋರ್ಟ್‌ನಲ್ಲಿ ಗಡಿ ಪ್ರಕರಣದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ.

    ಜಾತಿ- ಧರ್ಮ, ದೇವರುಗಳೆಲ್ಲ ಮನಸ್ಸಿನಲ್ಲಿ ಇದ್ದರೆ ಒಳ್ಳೆಯದ್ದು; ಸಚಿವ ಕೃಷ್ಣ ಬೈರೇಗೌಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts