More

    ಪಾಕಿಸ್ತಾನ: ಇಮ್ರಾನ್ ಖಾನ್, ಬುಶ್ರಾ ಬೀಬಿಗೆ 14 ವರ್ಷ ಜೈಲು ಶಿಕ್ಷೆ

    ಇಸ್ಲಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಸಂಕಷ್ಟದಲ್ಲಿದ್ದಾರೆ. ತೋಷಖಾನಾ ಪ್ರಕರಣದಲ್ಲಿ ಇಬ್ಬರಿಗೂ 14 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

    ಇದನ್ನೂ ಓದಿ:ಸಂಸತ್ತಿನ ಬಜೆಟ್ ಅಧಿವೇಶನ: ವಿಪಕ್ಷಗಳಿಗೆ ಖಡಕ್​ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ

    ಪಾಕಿಸ್ತಾನದ ಜಿಯೋ ನ್ಯೂಸ್‌ನ ವರದಿಯಲ್ಲಿ ಈ ಮಾಹಿತಿಯನ್ನು ನೀಡಲಾಗಿದ್ದು, ಈ ದಂಪತಿಗೆ ಜೈಲು ಶಿಕ್ಷೆ ಮತ್ತು ಕಠಿಣ ಪರಿಶ್ರಮವನ್ನು ವಿಧಿಸಲಾಗಿದೆ ಎಂದು ಹೇಳಲಾಗಿದೆ.ನ್ಯಾಯಾಲಯವು ದಂಪತಿಗೆ 10 ವರ್ಷಗಳ ಕಾಲ ಸಾರ್ವಜನಿಕ ಕಚೇರಿಯಲ್ಲಿ ಇರುವುದನ್ನು ನಿರ್ಬಂಧಿಸಿದೆ ಮತ್ತು ಅವರಿಗೆ ಪಾಕಿಸ್ತಾನಿ ರೂಪಾಯಿ 787 ಮಿಲಿಯನ್ ದಂಡವನ್ನು ವಿಧಿಸಿದೆ.

    ದೇಶದ ಸೂಕ್ಷ್ಮ ಮಾಹಿತಿಗಳ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಇಮ್ರಾನ್ ಮತ್ತು ಇತರರಿಗೆ 10 ವರ್ಷಗಳ ಜೈಲು ಶಿಕ್ಷೆಯಾಗಿತ್ತು. ಇದರ ಬೆನ್ನಲ್ಲೇ ಇಂದು ಮತ್ತೊಂದು ಪ್ರಕರಣದಲ್ಲಿ ಶಿಕ್ಷೆಯಾಗಿರುವುದರಿಂದ ಫೆಬ್ರುವರಿ 8ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಮರಳುವ ನಿರೀಕ್ಷೆಯಲ್ಲಿದ್ದ ಇಮ್ರಾನ್ ಖಾನ್ ಅವರಿಗೆ ಭಾರಿ ಹಿನ್ನಡೆಯಾಗಿದೆ ಎಂದು ಹೇಳಲಾಗಿದೆ.

    ಅಕ್ಕೊ–ಯು–ಎಂಟಬಿಲಿಟಿ ನ್ಯಾಯಾಲಯದ ನ್ಯಾಯಾಧೀಶರಾದ ಮೊಹಮ್ಮದ್ ಬಶೀರ್ ಅವರು ಇಮ್ರಾನ್ ಖಾನ್ ಅವರನ್ನು ಇರಿಸಲಾಗಿರುವ ರಾವಲ್ಪಿಂಡಿಯ ಅದಿಯಾಲಾ ಜೈಲಿನಲ್ಲೇ ಪ್ರಕರಣದ ವಿಚಾರಣೆ ನಡೆಸಿದರು.

    ಪ್ರಕರಣದ ತೀರ್ಪಿನ ಸಂದರ್ಭ ಇಮ್ರಾನ್ ಪತ್ನಿ ಬುಶ್ರಾ ಅವರು ನ್ಯಾಯಾಲಯದಲ್ಲಿ ಹಾಜರಿರಲಿಲ್ಲ. ತೋಷಖಾನಾಗೆ ಬಂದ ಉಡುಗೊರೆಗಳ ಮಾಹಿತಿ ಬಹಿರಂಗಪಡಿಸದಿರುವುದು ಮತ್ತು ಕೆಲ ಉಡುಗೊರೆಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದ ಆರೋಪ ಇಮ್ರಾನ್ ಖಾನ್ ಮೇಲಿತ್ತು ಎಂದು ವರದಿ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts