ರಂಗ ಕಲಾವಿದನಿಗೆ ಗೌರವ

sri kalavida
ಉಡುಪಿ ಮಲಬಾರ್ ಗೋಲ್ಡ್ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಆಶ್ರಯದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಪ್ರಯುಕ್ತ ಶೃಂಗೇರಿ ರಂಗಕಲಾವಿದ ರಮೇಶ್ ಬೇಗಾರು ಅವರನ್ನು ಮಲಬಾರ್ ಗೋಲ್ಡ್ ಸಭಾಂಗಣದಲ್ಲಿ ಗೌರವಿಸಲಾಯಿತು.
Published on

ಶೃಂಗೇರಿ: ಉಡುಪಿ ಮಲಬಾರ್ ಗೋಲ್ಡ್ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಆಶ್ರಯದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಪ್ರಯುಕ್ತ ಶೃಂಗೇರಿ ರಂಗಕಲಾವಿದ ರಮೇಶ್ ಬೇಗಾರು ಅವರನ್ನು ಮಂಗಳವಾರ ಮಲಬಾರ್ ಗೋಲ್ಡ್ ಸಭಾಂಗಣದಲ್ಲಿ ಗೌರವಿಸಲಾಯಿತು. ನಾಲ್ಕು ದಶಕಗಳಿಂದ ರಂಗಭೂಮಿ, ಕಿರುತೆರೆ, ಚಲನಚಿತ್ರ ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿರುವ ಬೇಗಾರು ಅವರು 16 ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ. ಮಲೆನಾಡಿನ ಗ್ರಾಮೀಣ ಭಾಗದಲ್ಲಿ ನಾಟಕೋತ್ಸವ ಸಂಘಟಿಸಿದ ಕೀರ್ತಿ ಇವರದು. ಈ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದ ಕಲಾವಿದರನ್ನು ಗುರುತಿಸಿ ನೀಡಲಾಗುವ ವಿಶ್ವರಂಗ ಪುರಸ್ಕಾರ ರಮೇಶ್ ಬೇಗಾರು ಅವರಿಗೆ ಲಭಿಸಿದೆ. ಕರ್ಣನ ಪಾತ್ರ ವೈಖರಿಯ ಕರ್ಣಭಾರ ಮತ್ತು ಮಹಾರಥಿ ಕರ್ಣ ಅವರ ನಿರ್ದೇಶನದ ಅತ್ಯುತ್ತಮ ನಾಟಕಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net