ಹುಲಿ ದಾಳಿಗೆ ಕಾರ್ಮಿಕ ಬಲಿ; 2 ದಿನಗಳ ಹಿಂದಷ್ಟೇ ಒಂದು ವ್ಯಾಘ್ರ ಸೆರೆ, ಇಂದು ಇನ್ನೊಂದು ಪ್ರತ್ಯಕ್ಷ..

Tiger
Published on

ಕೊಡಗು: ಜಿಲ್ಲೆಯಲ್ಲಿ ಕಳೆದ ವಾರವಷ್ಟೇ ಒಂದು ಹುಲಿಯನ್ನು ಸೆರೆ ಹಿಡಿಯಲಾಗಿದ್ದರೂ ಇಂದು ವ್ಯಕ್ತಿಯೊಬ್ಬರು ಹುಲಿಗೆ ಬಲಿಯಾಗಿದ್ದು, ಊರಿನಲ್ಲಿ ವ್ಯಾಘ್ರಾತಂಕ ಉಂಟಾಗಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನಲ್ಲಿ ಈ ಪ್ರಕರಣ ನಡೆದಿದೆ.

ಪೊನ್ನಂಪೇಟೆ ತಾಲೂಕಿನ ಕೋತೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೊಮ್ಮಾಡು ಗ್ರಾಮದ ನಿವಾಸಿ, ಕಾರ್ಮಿಕ ಕೃಷ್ಣ (53) ಎಂಬವರು ಹುಲಿದಾಳಿಗೆ ಬಲಿಯಾಗಿದ್ದಾರೆ. ಇವರು ಎಂ.ಕೆ.ಪ್ರಕಾಶ್ ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು.

ಇಂದು ಬೆಳಗ್ಗೆ ಹಸು‌ವೊಂದರ ಮೇಲೆ ದಾಳಿ ನಡೆಸಿದ್ದ ಹುಲಿ, ಬಳಿಕ ಕಾರ್ಮಿಕನ ಮೇಲೆರಗಿ ಸಾಯಿಸಿದೆ. ಎರಡು ದಿನಗಳ ಹಿಂದಷ್ಟೇ ಒಂದು ಹುಲಿಯನ್ನು ಸೆರೆ ಹಿಡಿಯಲಾಗಿತ್ತು. ಆದರೆ ಇಂದು ಮತ್ತೊಂದು ಹುಲಿ ಕಾಣಿಸಿಕೊಂಡು ಜೀವಬಲಿ ಪಡೆದಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net