ಜನಸೇವಕನಾಗಿ ಕ್ಷೇತ್ರದಲ್ಲಿ ಕೆಲಸ

mla office
ಶಾಸಕ ಕೆ.ಎಸ್.ಆನಂದ್ ಅವರಿಗೆ ಕಾಂಗ್ರೆಸ್ ಮುಖಂಡರು ಹಾಗೂ ಸಾರ್ವಜನಿಕರು ಅಭಿನಂದಿಸಿದರು. ಭಂಡಾರಿ ಶ್ರೀನಿವಾಸ್, ತೋಟದಮನೆ ಮೋಹನ್, ಬೀರೂರು ದೇವರಾಜ್, ಚಂದ್ರಮೌಳಿ, ಆಸಂಕಲ್ಲೇಶ್ ಮತ್ತಿತರಿದ್ದರು.
Published on

ಕಡೂರು: ಜನಪರವಾಗಿ ಕೆಲಸ ನಿರ್ವಹಿಸಿಕೊಂಡು ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತುಗಳನ್ನು ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿಯ ಶಾಸಕರ ಜನಸೇವಕ ಕಚೇರಿಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಜನಸಾಮಾನ್ಯರು ತಮ್ಮ ಕುಂದುಕೊರತೆಗಳನ್ನು ಮುಕ್ತವಾಗಿ ಜನಸೇವಕ ಕಚೇರಿಯಲ್ಲಿ ಪರಿಹರಿಸಿಕೊಳ್ಳಬಹುದು. ಶಾಸಕ ಸ್ಥಾನಕ್ಕೆ ಚ್ಯುತಿ ಬಾರದಂತೆ ಜನಸಾಮಾನ್ಯರ ಕೆಲಸ ಕಾರ್ಯ ಮಾಡಲಾಗುತ್ತದೆ. ಜನರ ನಿರೀಕ್ಷೆಗೆ ತಕ್ಕಂತೆ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ ಎಂದರು.
ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಕ್ಷೇತ್ರದ ಶಾಸಕರ ನೂತನ ಜನಸೇವಕ ಕಚೇರಿ ಆರಂಭವಾಗಿದೆ. ಇಲ್ಲಿ ಜನರ ಯಾವುದೇ ಕೆಲಸಗಳು ಸುಗಮವಾಗಿ ನಡೆಯಬೇಕಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರವಾಗಿ ಲಾನುಭವಿಗಳಿಗೆ ಸವಲತ್ತು ದೊರಕಿಸುವ ಪ್ರಾಮಾಣಿಕ ಕಾರ್ಯವಾಗಬೇಕಿದೆ ಎಂದರು.
ಪುರಸಭಾ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಜನಸೇವಕ ಕಚೇರಿಯು ಕ್ಷೇತ್ರದ ಅಭಿವೃದ್ಧಿ ಹಾಗೂ ಪ್ರತಿಯೊಬ್ಬ ಜನಸಾಮಾನ್ಯನಿಗೂ ಸದುಪಯೋಗವಾಗುವ ನಿಟ್ಟಿನಲ್ಲಿ ಬಳಕೆಯಾಗಬೇಕಿದೆ ಎಂದರು. ಮುಖಂಡ ಬೀರೂರು ದೇವರಾಜ್ ಮಾತನಾಡಿ, ಸುಗಮವಾಗಿ ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ ಒತ್ತು ನೀಡುವ ಕಚೇರಿಯಾಗಬೇಕಿದೆ ಎಂದರು.
ತಾಪಂ ಇಒ ಪ್ರವೀಣ್, ಮುಖ್ಯಾಧಿಕಾರಿ ರುದ್ರೇಶ್, ಸಿಪಿಐ ಶಿವುಕುಮಾರ್, ಎಚ್.ಡಿ.ರೇವಣ್ಣ, ವೈದ್ಯಾಧಿಕಾರಿ ಡಾ. ರವಿಕುಮಾರ್, ರವಿಶಂಕರ್, ಪುರಸಭಾ ಸದಸ್ಯ ತೋಟದಮನೆ ಮೋಹನ್‌ಕುಮಾರ್, ಯರದಕೆರೆ ರಾಜಪ್ಪ, ಎಂ.ಎಚ್.ಚಂದ್ರಪ್ಪ, ಲೋಲಾಕ್ಷಿಬಾಯಿ, ಎಂ.ಆರ್.ಟಿ.ಸುರೇಶ್, ಸಿ.ನಂಜಪ್ಪ, ಕಡೂರು-ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ, ಆಸಂಕಲ್ಲೇಶ್, ಇಮ್ರಾನ್ ಖಾನ್, ಡಿ.ಉಮೇಶ್, ಸವಿತಾ, ಚಂದ್ರಪ್ಪ, ಲಿಂಗರಾಜು ರೇವಣ್ಣ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net