ಜಲಮಂಡಳಿ ನೀರಿನ ಘಟಕದಲ್ಲಿ ಕಾಮಗಾರಿ; ಬಲ್ಕ್​ ಪ್ಲೋ ಮೀಟರ್​ ಅಳವಡಿಕೆ

BWSSB
Published on

ಬೆಂಗಳೂರು: ಹಾರೋಹಳ್ಳಿಯಲ್ಲಿರುವ ಜಲಮಂಡಳಿಯ ನೀರಿನ ಟಕದಲ್ಲಿ ಮಂಗಳವಾರ ಯುಎ್​ಡಬ್ಲೂ ಬಲ್ಕ್​ ಪ್ಲೋ ಮೀಟರ್​ಗಳನ್ನು ಅಳವಡಿಸಲಾಗಿದೆ. ಇದರಿಂದ ನೀರು ಪೋಲಾಗದಂತೆ ತಡೆಯಲು ಹಾಗೂ ಸಮರ್ಪಕವಾಗಿ ನೀರು ಪಂಪ್​ ಮಾಡಲು ಸಾಧ್ಯವಾಗುತ್ತದೆ ಎಂದು ಜಲಮಂಡಳಿ ತಿಳಿಸಿದೆ.

ಕಾಮಗಾರಿ ಹಿನ್ನೆಲೆಯಲ್ಲಿ ಮಂಗಳವಾರದಿಂದ 24 ಗಂಟೆವರೆಗೆ ಕಾವೇರಿ ನೀರು ಸರಬರಾಜು ಯೋಜನೆಯೆ 4ನೇ ಹಂತದ 2ನೇ ಘಟ್ಟದಲ್ಲಿ ನೀರು ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು.

ಹೀಗಾಗಿ ಶ್ರೀನಿವಾಸನಗರ, ಮುನೇಶ್ವರನಗರ, ಜ್ಞಾನಜ್ಯೋತಿನಗರ, ಮಲ್ಲತ್ತಹಳ್ಳಿ, ಗೋವಿಂದರಾಜನಗರ, ಶಂಕರನಗರ ಸೇರಿ ನೂರಕ್ಕೂ ಅಧಿಕ ಭಾಗಗಳಿಗೆ 24 ಗಂಟೆ ಕಾಲ ನೀರು ಪೂರೈಕೆಯಾಗಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net