'ಮುಂದಿನ 100 ದಿನಗಳಲ್ಲಿ ಎಲ್ಲರ ವಿಶ್ವಾಸ ಗಳಿಸಿ': ಪ್ರಧಾನಿ ಮೋದಿ

Untitled design - 2024-02-18T171746.261
Published on

ಹೊಸದಿಲ್ಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದನ್ನು ಖಚಿತಪಡಿಸಿಕೊಳ್ಳುವ ಅಂತಿಮ ಗುರಿಯೊಂದಿಗೆ ಹೊಸ ಮತದಾರರನ್ನು ತಲುಪಲು ಮತ್ತು ಅವರ ವಿಶ್ವಾಸವನ್ನು ಭದ್ರಪಡಿಸಿಕೊಳ್ಳಲು ಮುಂದಿನ 100 ದಿನಗಳನ್ನು ಮೀಸಲಿಡುವಂತೆ ಪ್ರಧಾನಿ ನರೇಂದ್ರ ಮೋದಿ ಇಂದು (ಫೆ.18) ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಇಂದು ಹೊಸದಿಲ್ಲಿಯಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಸಮಾವೇಶದ ಸಮಾರೋಪ ದಿನದಂದು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಮುಂದಿನ 100 ದಿನಗಳಲ್ಲಿ ಮತದಾರರ ವಿಶ್ವಾಸ ಮತ್ತು ಬೆಂಬಲವನ್ನು ಗಳಿಸುವ ಉದ್ದೇಶವನ್ನು ಪಕ್ಷದ ಪ್ರತಿಯೊಬ್ಬ ಸದಸ್ಯರು ಮಾಡುವಂತೆ ಕೇಳಿಕೊಂಡರು. ನಮ್ಮಲ್ಲಿ ಪ್ರತಿಯೊಬ್ಬರು ಹೊಸ ಮತದಾರರು, ಪ್ರತಿ ಫಲಾನುಭವಿಗಳು ಮತ್ತು ಸಮುದಾಯವನ್ನು ತಲುಪಬೇಕು. ನಾವು ಎಲ್ಲರ ವಿಶ್ವಾಸ ಮತ್ತು ಬೆಂಬಲವನ್ನು ಗೆಲ್ಲಬೇಕಾಗಿದೆ" ಎಂದರು.

"ನಮ್ಮ ಪ್ರಾಮಾಣಿಕ ಕಾರ್ಯಕರ್ತರು 24X7 ಮತ್ತು ವರ್ಷಪೂರ್ತಿ ಜನರೊಂದಿಗೆ ಇರುತ್ತಾರೆ. ಇದೆಲ್ಲದರ ನಡುವೆ ಮುಂದಿನ 100 ದಿನಗಳಲ್ಲಿ, ನಾವು ಹೊಸ ಉತ್ಸಾಹ ಮತ್ತು ಚೈತನ್ಯದಿಂದ ಕೆಲಸ ಮಾಡಬೇಕಾಗಿದೆ. ಇಂದು ಫೆಬ್ರವರಿ 18 ಮತ್ತು ಈ ಅವಧಿಯಲ್ಲಿ 18 ವರ್ಷಗಳ ಮೈಲಿಗಲ್ಲನ್ನು ತಲುಪಿದ ಯುವಕರು ದೇಶದ 18ನೇ ಲೋಕಸಭೆಯನ್ನು ಆಯ್ಕೆ ಮಾಡಲಿದ್ದಾರೆ" ಎಂದು ಪ್ರಧಾನಿ ಹೇಳಿದರು.

"ನನ್ನ ಮನೆಯ ಬಗ್ಗೆ ಯೋಚನೆ ಮಾಡಿದ್ದರೇ ಇಂದು ಕೋಟಿ ಕೋಟಿ ಜನರಿಗೆ ಮನೆ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ನಾನು 'ರಾಷ್ಟ್ರನೀತಿ'ಗಾಗಿ ಕೆಲಸ ಮಾಡುತ್ತಿದ್ದೇನೆಯೇ ಹೊರತು 'ರಾಜನೀತಿ' (ರಾಜಕೀಯ) ಅಲ್ಲ. ಒಮ್ಮೆ ಹಿರಿಯ ನಾಯಕರೊಬ್ಬರು ನನಗೆ ಪ್ರಧಾನಿ ಮತ್ತು ಸಿಎಂ ಆಗಿ ಸಾಕಷ್ಟು ಕೆಲಸ ಮಾಡಿದ್ದೀರಿ, ಈಗ ವಿಶ್ರಾಂತಿ ಪಡೆಯಬೇಕು ಎಂದು ಹೇಳಿದ್ದರು. ಆದರೆ ನಾನು 'ರಾಷ್ಟ್ರನೀತಿ'ಗಾಗಿ ಕೆಲಸ ಮಾಡುತ್ತಿದ್ದೇನೆ, 'ರಾಜನೀತಿ'ಗಾಗಿ ಅಲ್ಲ" ಎಂದು ಪಿಎಂ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net