More

    ಆಧಾರ್​ ನಿಷ್ಕ್ರಿಯೆಗೊಳಿಸ್ತಿದೆ: ಕೇಂದ್ರದ ವಿರುದ್ಧ ಮಮತಾ ಬ್ಯಾನರ್ಜಿ ಆರೋಪ

    ಕೋಲ್ಕತ್ತಾ: ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ಆಧಾರ್ ಕಾರ್ಡ್ ನಿಷ್ಕ್ರಿಯಗೊಳಿಸಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

    ಇದನ್ನೂ ಓದಿ: ಕೌರವ, ಪಾಂಡವರಂತೆ ಎರಡು ಪಾಳಯವಾಗಿದೆ ದೇಶ ರಾಜಕಾರಣ: ಅಮಿತ್ ಶಾ

    ಬಿರ್ಬೂಮ್ ಜಿಲ್ಲೆಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ವಿತರಣಾ ಕಾರ್ಯಕ್ರಮದಲ್ಲಿ ಸಿಎಂ ಮಮತಾ ಮಾತನಾಡಿದರು. ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಗಳ ಲಾಭ ಜನರಿಗೆ ತಲುಪುತ್ತಿಲ್ಲ. ಆಧಾರ್ ಕಾರ್ಡ್ ಇಲ್ಲದಿದ್ದರೆ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ಹೇಗೆ ಒದಗಿಸುವುದು ಎಂದು ಪ್ರಶ್ನಿಸಿದರು.

    “ನೀವೆಲ್ಲರೂ ಜಾಗರೂಕರಾಗಿರಿ. ಕೇಂದ್ರ ಸರ್ಕಾರವು ಬಂಗಾಳದ ಹಲವು ಜಿಲ್ಲೆಗಳಲ್ಲಿ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುತ್ತಿದೆ. ಅವುಗಳನ್ನು ಸರ್ಕಾರಿ ಯೋಜನೆಗಳೊಂದಿಗೆ ಡಿಲಿಂಕ್ ಮಾಡುತ್ತಿದೆ. ಆದರೆ, ನಾವು ಯಾವುದೇ ಫಲಾನುಭವಿಗೆ ಕಲ್ಯಾಣ ಪ್ರಯೋಜನಗಳಿಂದ ವಂಚಿತರಾಗಲು ಬಿಡುವುದಿಲ್ಲ” ಎಂದು ದೀದಿ ಹೇಳಿದರು.

    ಹರಿಯಾಣ ಮತ್ತು ಪಂಜಾಬ್‌ನಲ್ಲಿ ರೈತರ ಪ್ರತಿಭಟನೆಗಳನ್ನು ಉಲ್ಲೇಖಿಸಿದ ಅವರು, ಬಂಗಾಳದಲ್ಲಿ ಅಕ್ಕಿ ರೈತರಿಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ಹೇಳಿದರು. ರೈತರ ಪ್ರತಿಭಟನೆಗೆ ವಂದನೆ ಸಲ್ಲಿಸಿದರು. ಅವರ ಮೇಲಿನ ದಾಳಿಯನ್ನು ಖಂಡಿಸುತ್ತೇನೆ ಎಂದು ಹೇಳಿದರು.

    ಕೇರಳದ ನ್ಯೂಸ್​ ಚಾನೆಲ್‌ ಬ್ಯಾಂಕ್‌ ಅಕೌಂಟ್‌ ಸ್ಥಗಿತ..! ಇದರಲ್ಲಿದೆಯೇ ಡಿ.ಕೆ.ಶಿ ಹೂಡಿಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts